ಪ್ರತಾಪ್‌ ಸಿಂಹಗೆ ಸಿದ್ದರಾಮಯ್ಯ ಹೆಸರಿನಿಂದಲೇ ಪ್ರಖ್ಯಾತಿ   ➤ ಶಾಸಕ ಜಮೀರ್‌ ಅಹಮದ್‌ ಖಾನ್‌ ವಾಗ್ದಾಳಿ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.25 ರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟೀಕೆ ಪ್ರತಿಟೀಕೆಗಳ ಸದ್ದು ಜೋರಾಗಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿದ್ದ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಈಗ ಶಾಸಕ ಜಮೀರ್‌ ಅಹಮದ್‌ ಖಾನ್‌ ವಾಗ್ದಾಳಿ ಮಾಡಿದ್ದಾರೆ.ಸಂಸದರಾಗಿ ಪ್ರತಾಪ್ ಸಿಂಹ ಅವರ ಕೊಡುಗೆ ಸೊನ್ನೆ.

ಅವರು ಸಿದ್ದರಾಮಯ್ಯ ಬಗ್ಗೆ ಮಾತನಾಡಿಯೇ ನಾಯಕರಾಗಲು ಹೊರಟವರು. ಪ್ರತಾಪ್‌ ಸಿಂಹ ಅವರು ರಾಜಕೀಯದಲ್ಲಿ ಉಳಿಯಬೇಕಾದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿದರೆ ಮಾತ್ರವೇ ಸಾಧ್ಯವಿದೆ, ಬೆಳಗ್ಗೆದ್ದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಬೇಕಾಗಿದೆ.ಸಂಸದ ಪ್ರತಾಪ್ ಸಿಂಹಾಗೆ ರಾತ್ರಿಯ ಕನಸ್ಸಿನಲ್ಲೂ ಸಿದ್ದರಾಮಯ್ಯ ಅವರೇ ಬರುತ್ತಾರೆ. ವರುಣಾದಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ.

Also Read  10 ಮಂದಿ IAS ಅಧಿಕಾರಿಗಳ ವರ್ಗಾವಣೆ..!! - ರಾಜ್ಯ ಸರ್ಕಾರ ಆದೇಶ

 

 

 

error: Content is protected !!
Scroll to Top