(ನ್ಯೂಸ್ ಕಡಬ)Newskadaba.com ನವದೆಹಲಿ,ಏ.25 ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ 16 ಲಕ್ಷ ರೂಪಾಯಿ ದಂಡ ಸೇರಿದಂತೆ ದೇಶದ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಒಟ್ಟು 44 ಲಕ್ಷ ರೂಪಾಯಿ ದಂಡ ವಿಧಿಸಿದೆ.
ನಿಗದಿತ ಅವಧಿಯಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ವರ್ಗಾಯಿಸಲು ವಿಫಲವಾದ ಕಾರಣ ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 13 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
‘ಠೇವಣಿಗಳ ಮೇಲಿನ ಬಡ್ಡಿ ದರ’ದ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಪುಣೆಯ ಜನತಾ ಸಹಕಾರಿ ಬ್ಯಾಂಕ್‌ಗೆ 13 ಕೋಟಿ ರೂ. ದಂಡವನ್ನು ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ.