ಸ್ವಿಮ್ಮಿಂಗ್‌ಪೂಲ್‌ಗೆ ಮೇಲಿಂದ ಜಿಗಿದ ಯುವಕ ➤ ಈಜುತ್ತಿದ್ದ ವೃದ್ಧ ಮೃತ್ಯು

(ನ್ಯೂಸ್ ಕಡಬ)newskadaba.com ಮುಂಬೈ, ಏ.25. ಮುಂಬೈನ ಗೋರೆಗಾಂವ್ ಪ್ರದೇಶದ ಓಝೋನ್ ಈಜುಕೊಳಕ್ಕೆ ಯುವಕನೊಬ್ಬ ಎತ್ತರದಿಂದ ಹಾರಿದ ಪರಿಣಾಮ 72 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ.


ಮೃತರನ್ನು ವಿಷ್ಣು ಸಮಂತ್ ಎಂದು ಗುರುತಿಸಲಾಗಿದೆ. ಇನ್ನು ವಿಷ್ಣು ಸಮಂತ್ ಅವರು ಈಜುತ್ತಿದ್ದ ವೇಳೆ 20 ವರ್ಷದ ಯುವಕನೊಬ್ಬ ಎತ್ತರದಿಂದ ಕೊಳಕ್ಕೆ ಹಾರಿದಾಗ ವೃದ್ಧನ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!

Join the Group

Join WhatsApp Group