ಉಳ್ಳಾಲ: ದರ್ಗಾ ವಿಹಾರಕ್ಕೆ ಬಂದ ವ್ಯಕ್ತಿ ಸಮುದ್ರಪಾಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.25. ದರ್ಗಾಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಸಮುದ್ರದಲ್ಲಿ ಮಕ್ಕಳೊಂದಿಗೆ ನೀರಾಟಕ್ಕಿಳಿದ ವೇಳೆ ನೀರುಪಾಲಾಗಿ ಮೃತಪಟ್ಟಿದ್ದು ,ಆತನ ಮಗನನ್ನ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಮಳಲಿ ನಿವಾಸಿ ಖಾಲಿದ್(51) ಸಮುದ್ರ ಪಾಲಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಖಾಲಿದ್ ಅವರು ತನ್ನ ಪತ್ನಿ,ಮಗ,ಸಂಬಂಧಿ ಮಕ್ಕಳ ಜೊತೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು. ದರ್ಗಾ ಭೇಟಿ ಬಳಿಕ ಉಳ್ಳಾಲ ಬೀಚ್ ಗೆ ತೆರಳಿದ್ದರು. ಈ ವೇಳೆ ಖಾಲಿದ್ ಮಗನೊಂದಿಗೆ ನೀರಾಟವಾಡುತ್ತಿದ್ದ ವೇಳೆ ಅಬ್ಬರದ ಅಲೆಯು ಖಾಲಿದನ್ನು ನೀರು ಪಾಲಾಗಿಸಿದೆ ಎಂದು ತಿಳಿದುಬಂದಿದೆ.

Also Read  ವಿದ್ಯುತ್ ತಂತಿ ಸ್ಪರ್ಶಿಸಿ ಮೂವರ ಸಾವು

 

error: Content is protected !!
Scroll to Top