ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಭೇಟೆ   ➤ನಿವೃತ್ತ ಡಿಸಿಎಫ್‌ ನಾಗರಾಜು ಮನೆಯಲ್ಲಿ ಆನೆ ದಂತ ಪತ್ತೆ..!

(ನ್ಯೂಸ್ ಕಡಬ)Newskadaba.comದಾವಣಗೆರೆ,ಏ.24 ರಾಜ್ಯದೆಲ್ಲೆಡೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟೆ ನಡೆಸಿದ್ದು, ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ನಿವೃತ್ತ ಡಿಸಿಎಫ್‌ ನಾಗರಾಜು ಮನೆಯಲ್ಲಿ ಆನೆ ದಂತ ಪತ್ತೆಯಾಗಿದೆ.ಚುನಾವಣೆ ಹೊತ್ತಿನಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ರಾಜ್ಯದ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ನಿವೃತ್ತ ಡಿಸಿಎಫ್‌ ನಾಗರಾಜು ಮನೆಗೂ ದಾಳಿ ನಡೆಸಿ ಭರ್ಜರಿ ಭೇಟೆ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವಾಗ ಆನೆ ದಂತ ಪತ್ತೆಯಾದ ಬೆನ್ನಲ್ಲೆ ಪರವಾನಗಿ ಪಡೆದ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Also Read  ಚಾಕುವಿನಿಂದ ಇರಿದು ಯುವಕನ ಹತ್ಯೆ..!

ಅಷ್ಟೇ ಅಲ್ಲದೇ ಬೀದರ್ ಬಳ್ಳಾರಿ ಚಿತ್ರದುರ್ಗ ದಾವಣಗೆರೆ ಕೋಲಾರದಲ್ಲಿ ದಾಳಿ ನಡೆಸಲಾಗಿದ್ದು, ದಾಳಿ ವೇಳೇಯಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

 

error: Content is protected !!
Scroll to Top