ದಕ್ಷಿಣ ಆಫ್ರಿಕಾದಿಂದ ತಂದಿದ್ದ ಕೊನೆಯುಸಿರೆಳೆದ ಚೀತಾ

(ನ್ಯೂಸ್ ಕಡಬ)newskadaba.com ಮಧ್ಯ ಪ್ರದೇಶ, ಏ.24. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಕೊನೆಯುಸಿರೆಳೆದಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಉದಯ್ ಎಂಬ ಚಿರತೆ ಮೃತಪಟ್ಟಿದೆ.

ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೀತಾ ಅಸುನೀಗಿದೆ. ಕುನೋದಲ್ಲಿ ಇದರೊಂದಿಗೆ ಎರಡನೇ ಚೀತಾ ಸಾವನ್ನಪ್ಪಿದಂತಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ತಿಳಿಸಿದ್ದಾರೆ.

Also Read  9,999 ರೂ. ಗೆ ಹೊಸ ಇನ್ಫಿನಿಕ್ಸ್​ ಫೋನ್ ಬಿಡುಗಡೆ

 

error: Content is protected !!
Scroll to Top