ಮಂಗಳೂರು: ವಾಹನಗಳ ಪ್ರಖರ ಬೆಳಕಿನ ವಿರುದ್ಧ ಕಾರ್ಯಾಚರಣೆ   ➤ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್

(ನ್ಯೂಸ್ ಕಡಬ)newskadaba.com ಮಂಗಳೂರು, ಏ.24. ಸಂಚಾರಿ ನಿಯಮಗಳನ್ನು ಮೀರಿ ಪ್ರಖರ ಬೆಳಕು ಅಳವಡಿಸಿರುವ ವಾಹನಗಳ ವಿರುದ್ಧ ಮಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸುಮಾರು 25 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಜರಗಿಸಿದ್ದಾರೆ.


ವಾಹನಗಳಲ್ಲಿ ಅತ್ಯಾಕರ್ಷಣೆಯ ಉದ್ದೇಶದಿಂದ ಅನಗತ್ಯವಾಗಿ ಅಳವಡಿಸುವ ಇಂತಹ ಬೆಳಕುಗಳಿಂದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ. ಹೀಗಾಗಿ ಪ್ರಖರ ಬೆಳಕಿನ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.

Also Read  ಗೆಲುವು ಅಭಿವೃದ್ದಿ ಯೇ ಪಕ್ಷದ ಗುರಿ ► ಡಿ.ಎಸ್.ವೀರಯ್ಯ

error: Content is protected !!
Scroll to Top