ಗುಮ್ಮಟ ನಗರಿಯಲ್ಲಿ ಅದ್ಧೂರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ..!

(ನ್ಯೂಸ್ ಕಡಬ)Newskadaba.com ವಿಜಯಪುರ,ಏ.24 ವಿಧಾನಸಭೆ ಚುನಾವಣೆ ಹಿನ್ನೆಲೆ ನಗರದಲ್ಲಿ ಸಂಜೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅದ್ಧೂರಿ ರೋಡ್ ಶೋ ನಡೆಸಿದರು.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಮ್ಮಿಕೊಂಡ ಬಸವಜಯಂತಿ ಉತ್ಸವದಲ್ಲಿ ಭಾಗಿಯಾದ ಬಳಿಕ ನಗರಕ್ಕೆ ಆಗಮಿಸಿದ ಅವರು, ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಮುಂದಾದರು.

ಶಿವಾಜಿ ವೃತ್ತದಿಂದ ಆರಂಭಗೊಂಡ ಬೃಹತ್ ರೋಡ್ ಶೋನಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೈಘೋಷ ಕೂಗುತ್ತ ಪಾಲ್ಗೊಂಡಿದ್ದರು.

Also Read  ತಂಬಾಕು ಉತ್ಪನ್ನ ಬಳಕೆ ಬದುಕಿಗೆ ಮಾರಕ ➤ ಡಾ ಹನುಮಂತರಾಯಪ್ಪ

 

error: Content is protected !!
Scroll to Top