(ನ್ಯೂಸ್ ಕಡಬ)newskadaba.com ಕೊಪ್ಪಳ, ಏ.24. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಹೆದ್ದಾರಿ ವಿಧಾನಸಭೆ ಚುನಾವಣೆಯ ಸ್ಥಿರ ಚಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸರಕಾರಿ ಬಸ್ ನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 1.95 ಲಕ್ಷ ರೂ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಯಾದಿಗುಪ್ಪ ಹೆದ್ದಾರಿ ಕ್ರಾಸ್ ನಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ಘಟಕದ ಬಸ್ ಅನ್ನು (ಕೆಎ-37 ಎಫ್-0324) ತಡೆದು ತಪಾಸಣೆ ನಡೆಸಿದ್ದರು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಎಸ್ ಪಿಸಿ ಇನ್ಫ್ರಾ ಕಂಪನಿಯ ಮೇಲ್ವಿಚಾರಕ, ಶ್ರೀಕಾಕುಲಮ್ ಮೂಲದ ಶ್ರೀನಿವಾಸ ಅಪ್ಪರಾವ್ ಬಳಿ ಈ ಮೊತ್ತ ಪತ್ತೆಯಾಗಿದೆ ಎನ್ನಲಾಗಿದೆ. 1.95 ಲಕ್ಷ ರೂ. ಮೊತ್ತಕ್ಕೆ ಯಾವೂದೇ ದಾಖಲೆ ಇರಲಿಲ್ಲ, ಈ ಹಿನ್ನೆಲೆಯಲ್ಲಿ ನಗದು ಸೇರಿದಂತೆ ವ್ಯಕ್ತಿಯನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.