ಜಯ ಕರ್ನಾಟಕ, ವಿದ್ಯಾಮಾತಾ ಫೌಂಡೇಶನ್ ವತಿಯಿಂದ ವನಮಹೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಜೂ.19. ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ,ಸ್ವಚ್ಚ ಪರಿಸರ ಉಳಿವಿಗೆ ಗಿಡಮರಗಳ ಪೋಷಣೆ ಅಗತ್ಯ ,ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೆಕು ಎಂದು ಕೆಯ್ಯೂರು ಜಯಕರ್ನಾಟಕ ಘಟಕದ ಗೌರವಾಧ್ಯಕ್ಷ ,ಕೆಯ್ಯೂರು ಗ್ರಾ.ಪಂ.ಸದಸ್ಯ ಎ.ಕೆ.ಜಯರಾಮ ರೈ ಹೇಳಿದರು.

ಅವರು ಜೂ.18ರಂದು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ದೇವರಕಾಡಿನಲ್ಲಿ ಜಯ ಕರ್ನಾಟಕ ,ವಿದ್ಯಾಮಾತಾ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ನಡೆದ ವರುಣ ಯಜ್ಞ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾಮಾತಾ ಫೌಂಡೇಶನ್ನ ಅಧ್ಯಕ್ಷ ,ಜಯಕರ್ನಾಟಕ ರಾಮನಗರ ಜಿಲ್ಲಾ ಉಪಾಧ್ಯಕ್ಷ ಭಾಗ್ಯೇಶ್ ರೈ ಮಾತನಾಡಿ ,ಪರಿಸರ ನಾಶದಿಂದ ಎಲ್ಲೆಡೆ ಬರ ಪರಿಸ್ಥಿತಿ ತಲೆದೋರಿದೆ.ಈ ನಿಟ್ಟಿನಲ್ಲಿ ಜಯಕರ್ನಾಟಕ ಸಂಸ್ಥಾಪಕ ಎನ್.ಮುತ್ತಪ್ಪ ರೈಯವರ ಆಶಯದಂತೆ ಜಯಕರ್ನಾಟಕ ಸಂಘಟನೆಯ ವತಿಯಿಂದ ಒಂದು ಲಕ್ಷ ಗಿಡ ನೆಡುವ ಬೃಹತ್ ಯೋಜನೆಯ ಅಂಗವಾಗಿ ವಿದ್ಯಾಮಾತಾ ಫೌಂಡೇಶನ್ನ ಸಹಭಾಗಿತ್ವದೊಂದಿಗೆ ಆಯೋಜನೆ ಮಾಡಿದ್ದೇವೆ.ಇದು ನಿರಂತರತೆಯನ್ನು ಕಾಯ್ದುಕೊಳ್ಳಲಿದೆ ಎಂದರು. ನಾವು ಮಳೆ ಬರದಿದ್ದರೆ ದೇವರಿಗೆ 100 ಸೀಯಾಳಭಿಷೇಕ ಮಾಡಿಸುತ್ತೇವೆ ಅದರ ಜತೆ 100 ಗಿಡ ನೆಡುವ ಕಾರ್ಯವನ್ನೂ ನಡೆಸಿದರೆ ಪ್ರಕೃತಿ ರೂಢಿಯಂತೆ ಮಳೆ.ಬೆಳೆ ಸಮೃದ್ದಿಯಾಗಲಿದೆ. ಪ್ರಕೃತಿಯನ್ನೇ ದೇವರೆಂದು ಪೂಜಿಸುವವರು ನಾವು ಪ್ರಕೃತಿಯನ್ನು ಬೆಳೆಸಿ ಉಳಿಸಿಕೊಳ್ಳುವುದು ಅತ್ಯಗತ್ಯ ಎಂದರು.

Also Read  ಕಡಬ ಯುವಕ ಮಂಡಲದ ಕಟ್ಟಡದ ಸುತ್ತ ಮದ್ಯದ ಬಾಟಲಿಗಳ ಹುತ್ತ ► ಸ್ವಚ್ಛ ಗ್ರಾಮ ಕಡಬದಲ್ಲಿ ಮರೀಚಿಕೆಯಾಗುತ್ತಿರುವ ಸ್ವಚ್ಚತೆ

ಈ ಸಂದರ್ಭದಲ್ಲಿ ಜಯಕರ್ನಾಟಕ ಕೆಯ್ಯೂರು ಘಟಕದ ಅಧ್ಯಕ್ಷ ಕೃಷ್ಣ ಪ್ರಸಾದ್ ರೈ ,ಶ್ರೀ ದುರ್ಗಾ ಯುವಕ ಮಂಡಲ ಶರತ್ ಕುಮಾರ್ ಮಾಡಾವು ,ಶ್ರೀ ದುರ್ಗಾ ಸ್ಪೋಟ್ಸ್‌ ಕ್ಲಬ್ನ ಅಧ್ಯಕ್ಷ ಸತೀಶ್ ರೈ ದೇವಿನಗರ ,ವಿದ್ಯಾಮಾತಾ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಭವಿತ್ ಕುಮಾರ್ ,ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಚೆನ್ನಾವರ ,ಜಯಕರ್ನಾಟಕ ಘಟಕದ ಸದಸ್ಯರಾದ ಯೋಗೀಶ್ ರೈ ,ಚರಣ್ ಕುಮಾರ್ ,ಚೇತನ್ ರಾಜ್ ,ಸುರೇಶ್ ದೇವಿನಗರ ,ಚಂದ್ರಹಾಸ ಪಾಲ್ತಾಡು ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಕಲದ ಸತ್ಯ ಪ್ರಕಾಶ್ , ಕೆಯ್ಯೂರು ಓಂ ಫ್ರೆಂಡ್ಸ್‌ ಸದಸ್ಯರು ,ದುರ್ಗಾ ಯುವಕ ಮಂಡಲ,ದುರ್ಗಾ ಸ್ಪೋಟ್ಸ್‌ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

error: Content is protected !!
Scroll to Top