ಬೆಳ್ತಂಗಡಿ: ವಿದ್ಯುತ್‌ ತಂತಿ ಸ್ಪರ್ಶಿಸಿ ಮೂರು ಮಕ್ಕಳಿಗೆ ಗಾಯ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.23. ಚಾರ್ಮಾಡಿಯಲ್ಲಿ ಅಲ್ಯುಮಿನಿಯಂ ದೋಟಿ ಕೊಂಡೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಲೈನ್‌ಗೆ ಸಂಪರ್ಕಿಸಿ ಮೂವರು ಮಕ್ಕಳು ಗಾಯಗೊಂಡ ಘಟನೆ ನಡೆದಿದೆ.


ಇಮ್ತಿಯಾಜ್ ಅವರ ಮಕ್ಕಳಾದ ಮಹಮ್ಮದ್‌ ಆಲಿ (16), ಮಹಮ್ಮದ್‌ ಇನಾಜ್‌ (8) ಹಾಗೂ ಹನೀಫ್‌ ಅವರ ಪುತ್ರ ಅಯ್ನಾನ್‌ (6) ವಿದ್ಯುತ್‌ ಆಘಾತಕ್ಕೊಳಗಾದವರು.


ಇನ್ನು ಸ್ಥಳೀಯರು ಕೂಡಲೇ ಅವರನ್ನು ಕಕ್ಕಿಂಜೆ ಹಾಗೂ ಉಜಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಒದಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Also Read  ಮಂಗಳೂರು: ಇನ್ಮುಂದೆ ಮನೆ ಬಾಗಿಲಿಗೇ "ಶಬರಿಮಲೆ ಶ್ರೀ ಅಯ್ಯಪ್ಪನ ಪ್ರಸಾದ"

 

error: Content is protected !!
Scroll to Top