ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್

(ನ್ಯೂಸ್ ಕಡಬ)newskadaba.com ಮಂಡ್ಯ, ಏ.23. ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಖಾಸಗಿ ವೋಲ್ವೊ ಬಸ್ಸೊಂದು ಚಲಿಸುವಾಗಲೇ ಹೊತ್ತಿ ಉರಿದ ಘಟನೆ ಶ್ರೀರಂಗಪಟ್ಟಣದಲ್ಲಿ ಶನಿವಾರ ನಡೆದಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ 30 ಪ್ರಯಾಣಿಕರು ಪಾರಾಗಿದ್ದಾರೆ.


ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌’ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಬೊಬ್ಬೆ ಹೊಡೆದು ಬಸ್ಸನ್ನು ನಿಲ್ಲಿಸಿದ್ದಾರೆ. ಅಪಾಯದ ಸೂಚನೆ ಅರಿತ ಬಸ್ ಚಾಲಕ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನೂ ಕೆಳಗೆ ಇಳಿಸಿದ್ದಾರೆ.

Also Read  ಮಲ್ಪೆ : ಬೀಚ್ ನಲ್ಲಿ ಮುಳುಗಿದ ಯುವಕ ಯುವತಿಯ ರಕ್ಷಣೆ

error: Content is protected !!
Scroll to Top