ಕೊಂಬಾರು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಶಿರಾಡಿ ಗ್ರಾಮದ ಕೊಂಬಾರು ನಿವಾಸಿ ಓ.ಜಿ. ಜೋನ್ (60) ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆ ಬಳಿಯ ತೋಟಕ್ಕೆ ರಾತ್ರಿ 10 ಸುಮಾರಿಗೆ ನೀರು ಬಿಡಲು ಹೋಗಿದ್ದ ಇವರು ಅರ್ಧಗಂಟೆ ಕಳೆದರೂ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಸಂಶಯಗೊಂಡ ಮನೆಯವರು ಹುಡುಕಾಡಿದಾಗ ತೋಟದಲ್ಲಿರುವ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಕೈಯಲ್ಲಿದ್ದ ಟಾರ್ಚ್ ಲೈಟ್ ಕೆರೆಗೆ ಜಾರಿ ಬಿದ್ದು ಅದನ್ನು ಹೆಕ್ಕಲು ಹೋದ ಇವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮೃತರ ಪುತ್ರ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಅಪಘಾತಗಳ ನಿಯಂತ್ರಣಕ್ಕೆ ಅಧಿಕಾರಿಗಳು ಶ್ರಮವಹಿಸಿ  - ಸಿಂಧೂ ಬಿ ರೂಪೇಶ್

error: Content is protected !!
Scroll to Top