ಮ್ಯಾನ್‌ಹೋಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆ.!

(ನ್ಯೂಸ್ ಕಡಬ)Newskadaba.com ಹರಿಯಾಣ ,ಏ.21 ಇಲ್ಲಿನ ರಸ್ತೆ ಬದಿಯ ಮ್ಯಾನ್‌ಹೋಲ್‌ನಿಂದ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ವಾಟಿಕಾ ಚೌಕ್‌ನ ಬಳಿ ಬಾದಶಹಪುರದ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಮ್ಯಾನ್‌ಹೋಲ್ ತೆರೆದಿದೆ.

ಅದರಿಂದ ದುರ್ವಾಸನೆ ಬರುತ್ತಿದೆ ಎಂಬ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.ಈ ಸಂದರ್ಭ ಪೊಲೀಸರಿಗೆ ಒಳಗಡೆ ಮೃತ ದೇಹವಿರುವುದು ತಿಳಿದುಬಂದಿದೆ. ಬಳಿಕ ಅಗ್ನಿಶಾಮಕ ದಳ ಹಾಗೂ ಜೆಸಿಬಿ ಯಂತ್ರದ ನೆರವಿನಿಂದ 10 ಅಡಿ ಆಳಕ್ಕೆ ಬಿದ್ದ ಮೃತ ದೇಹವನ್ನು ಮ್ಯಾನ್‌ಹೋಲ್‌ನಿಂದ ಎತ್ತಲಾಗಿದೆ. ಈ ಕಾರ್ಯಾಚರಣೆಗೆ ಮೂರು ತಾಸು ಬೇಕಾಯಿತು.

Also Read  ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಆರಂಭ

 

 

error: Content is protected !!
Scroll to Top