ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆದ ಕೂಲಿ ಕಾರ್ಮಿಕರ ಮಗ..!

(ನ್ಯೂಸ್ ಕಡಬ)Newskadaba.com ತಾಳಿಕೋಟೆ,ಏ.21 ಜಿಲ್ಲೆಯ ತಾಳಿಕೋಟೆ ಪಟ್ಟಣದ ಎಸ್.ಕೆ. ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ರಾಹುಲ್ ರಾಠೋಡ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಸ್ಥಾನದಲ್ಲಿ ಉತ್ತೀರ್ಣನಾಗಿದ್ದಾನೆ. ವಿದ್ಯಾರ್ಥಿ ರಾಹುಲ್ ರಾಠೋಡ ಪಿಯು ಪರೀಕ್ಷೆಯಲ್ಲಿ 592 ಅಂಕ ಪಡೆದು ಸಾಧನೆ ಮಾಡಿದ್ದಾನೆ.

ವಿದ್ಯಾರ್ಥಿ ರಾಹುಲ್ ರಾಠೋಡ ಕುಟುಂಬ ಕಡು ಬಡತನದಾಗಿದ್ದು, ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ.ರಾಹುಲ್ ರಾಠೋಡನ ಸಾಧನೆ ಕಂಡು ವಿದ್ಯಾರ್ಥಿಯ ತಂದೆ- ತಾಯಿ ಮೋತಿಲಾಲ್ ಹಾಗೂ ಸವಿತಾ ಸಂತಸಪಟ್ಟಿದ್ದು, ವಿದ್ಯಾರ್ಥಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

Also Read  ಕಡಬ: ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ➤ಮಾನವೀಯತೆ ಮೆರೆದ ಪೊಲೀಸರು ಹಾಗೂ ಪತ್ರಕರ್ತರು

 

 

 

error: Content is protected !!
Scroll to Top