ವಿದ್ಯುತ್ ಬಿಲ್ ಕಟ್ಟದೆ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ► ಕಡಬ ಠಾಣೆಯೆದುರು ಜಮಾಯಿಸಿದ ಮೆಸ್ಕಾಂ ಲೈನ್ ಮ್ಯಾನ್ ಗಳು

(ನ್ಯೂಸ್ ಕಡಬ) newskadaba.com ಕಡಬ, ಜ.12. ವಿದ್ಯುತ್ ಬಿಲ್ ಬಾಕಿ ಇದ್ದುದಕ್ಕೆ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಮೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಲೈನ್ ಮ್ಯಾನ್ ಗಳೆಲ್ಲ ಸೇರಿ ಕಡಬ ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕಡಬ ಸಮೀಪದ ರೆಂಜಿಲಾಡಿ ಗ್ರಾಮದ ಅಲಂಗಾಜೆ ತರ್ಪೇಲ್ ನಿವಾಸಿ ಟಿ.ವಿ.ಕುರಿಯನ್ ಎಂಬವರ ಮನೆಯ ವಿದ್ಯುತ್ ಬಿಲ್ 460 ರೂ. ಬಾಕಿ ಇದ್ದ ಕಾರಣ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಕಡಬ ರಮೇಶ್ ಪಾಟೀಲ್ ಎಂಬವರಿಗೆ ಕುರಿಯನ್ ರವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಮೇಶ್ ಪಾಟೀಲ್ ರವರು ತಕ್ಷಣವೇ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳೆಲ್ಲ ಸೇರಿ ಶುಕ್ರವಾರ ಸಂಜೆ ಕಡಬ ಠಾಣೆಗೆ ಆಗಮಿಸಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹಲ್ಲೆ ನಡೆಸಿದ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಕ್ಷಣವೇ ಪೊಲೀಸರು ಟಿ.ವಿ.ಕುರಿಯನ್ ರವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿ ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ. ಘಟನೆಯ ಬಗ್ಗೆ ಕಡಬ ಠಾಣೆಯಲ್ಲಿ ಸಣ್ಣ ಪ್ರಕರಣ ದಾಖಲಾಗಿದೆ.

Also Read  ಮುಲ್ಕಿ: ನೀರಿನಲ್ಲಿ ಮುಳುಗಿ ಕಡಬದ ವ್ಯಕ್ತಿ ನಿಧನ

error: Content is protected !!
Scroll to Top