ಹಲವು ಉದ್ಯಮಿ ಮನೆ, ಕಚೇರಿಯಲ್ಲಿ ಇಡಿ ➤ ಐಟಿ ಅಧಿಕಾರಿಗಳಿಂದ ಪರಿಶೀಲನೆ

(ನ್ಯೂಸ್ ಕಡಬ)newskadaba.com ಉಡುಪಿ, ಏ.21. ರಾಜ್ಯದ ಹಲವೆಡೆ ನಡೆದಿರುವ ಇಡಿ, ಐಟಿ ಅಧಿಕಾರಿಗಳ ದಾಖಲೆ ಪರಿಶೀಲನೆ ಕಾರ್ಯ ಉಡುಪಿಯಲ್ಲಿ ಕೂಡಾ ನಡೆದಿದ್ದು, ಉಡುಪಿಯ ಹಲವು ಉದ್ಯಮಿ, ಕಂಟ್ರಾಕ್ಟರ್ ದಾರರ ಮನೆಗಳಲ್ಲಿ ದಾಖಲೆ ಪರೀಶೀಲನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಇಡಿ ಅಧಿಕಾರಿಗಳು ಮಲ್ಪೆ ಬೀಚ್ ನಿರ್ವಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿ ಯ ಮಾಲಿಕತ್ವದ ಮಲ್ಪೆಯಲ್ಲಿರುವ ಗೆಸ್ಟ್ ಹೌಸ್ ನ ಕಚೇರಿ, ರೆಸ್ಟೋರೆಂಟ್, ಅಂಗಡಿ, ಮನೆ ಮತ್ತು ಇತರ ಕಡೆಗಳಲ್ಲಿ 10 ರಿಂದ 12 ಜನ ಡಿ ಅಧಿಕಾರಿಗಳು ಏಕಕಾಲಕ್ಕೆ ದಾಖಲೆ ಪರೀಶೀಲನೆ ನಡೆಸಿದ್ದಾರೆ.ಮತ್ತೊಂದು ಘಟನೆಯಲ್ಲಿ ಉಡುಪಿಯ ಪ್ರಥಮ ದರ್ಜೆ ಪಿ ಡ್ಬ್ಲೂಡಿ ಕಂಟ್ರಕ್ಟರ್ ಡಾ. ಜಿ ಶಂಕರ್ ಸಂಸ್ಥೆಗಳಲ್ಲಿ ಕೂಡಾ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನೋಂದಣಿಯ ವಾಹನದಲ್ಲಿ ಆಗಮಿಸಿದ ಅಧಿಕಾರಿಗಳು ಏಕಕಾಲದಲ್ಲಿ ಜಿ.ಶಂಕರ್ ಮನೆ ಸೇರಿ, ಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

Also Read  ಹಳೆಯ ಪೊಲೀಸ್ ವಸತಿಗೃಹದ ಸಾಮಾಗ್ರಿಗಳ ಬಹಿರಂಗ ಹರಾಜು ಪ್ರಕ್ರಿಯೆ

error: Content is protected !!
Scroll to Top