ಮಂಗಳೂರು: ಇನ್‌ಸ್ಟಾಗ್ರಾಂ ಖಾತೆ ಮೂಲಕ 90 ಸಾವಿರ ರೂ.ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.21. ಇನ್‌ಸ್ಟಾಗ್ರಾಂ ಖಾತೆಯ ಮೂಲಕ 90 ಸಾವಿರ ರೂ. ವಂಚನೆ ಮಾಡಿರುವ ಕುರಿತಂತೆ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಇನ್‌ಸ್ಟಾ ಗ್ರಾಂ ಖಾತೆಯನ್ನು ವೀಕ್ಷಿಸುತ್ತಿರುವಾಗ ಸಮಯ ಅವರ ಗೆಳೆಯನ ಖಾತೆಯಿಂದ “ರಿಸಿವ್ಡ್ ರುಪೀಸ್‌ 4,16,000 ಇನ್‌ ಯುವರ್‌ ಇನ್‌ಸ್ಟಾಗ್ರಾಂ ವಾಲೆಟ್‌’ ಎಂಬ ಪೋಸ್ಟ್‌ ಬಂದಿದೆ. ತತ್‌ಕ್ಷಣ ಅವರಿಗೆ “ಲಿಝಿ ಹೋಪರ್‌’ ಎನ್ನುವ ಖಾತೆಯಿಂದ ಸಂದೇಶಗಳು ಬರಲು ಆರಂಭಿಸಿದ್ದು, ಅದು ಗೆಳೆಯನ ಇನ್‌ಸ್ಟಾಗ್ರಾಂ ಖಾತೆ ಎಂದು ನಂಬಿ ಎ. 12ರಂದು 40,000 ರೂ. ಮತ್ತು 13ರಂದು ಕ್ಯಾಶ್‌ ವಿಡ್ರಾವಲ್‌ ಪಿನ್‌ ಫೀ ಎಂದು 50 ಸಾವಿರ ರೂ.ಯನ್ನು ವರ್ಗಾಯಿಸಿದ್ದಾರೆ. ಬಳಿಕ ಅದೇ ದಿನ ಇನ್ನೂ 70,000 ರೂ. ಹಣವನ್ನು ವರ್ಗಾಯಿಸಲು ತಿಳಿಸಿದ್ದು, ಈ ಬಗ್ಗೆ ಗೆಳೆಯನಿಗೆ ಕರೆ ಮಾಡಿದಾಗ ಆತ “ತನ್ನ ಖಾತೆಯು ಸುಮಾರು 6 ತಿಂಗಳಿನಿಂದ ಹ್ಯಾಕ್‌ ಆಗಿರುವುದಾಗಿ’ ತಿಳಿಸಿದ್ದಾನೆ.

Also Read  Jak Ograć Bukmachera? Matematyczne Sposoby Yak Grać U Buk

 

error: Content is protected !!
Scroll to Top