ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಇಲ್ಲಿನ ಬಿಳಿಯೂರು ಎಂಬಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಶುಕ್ರವಾರದಂದು ಪತ್ತೆಯಾಗಿದೆ.

ಮೃತದೇಹವು ಕೊಳೆತಿದ್ದು, ಮೃತ ಮಹಿಳೆಗೆ ಸುಮಾರು 40 ರಿಂದ 42 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹದ ಬಳಿಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದ ಚೀಲವೊಂದು ಪತ್ತೆಯಾಗಿದ್ದು, ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ ತೆರಳಿರಬಹುದೆನ್ನಲಾಗಿದೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅಥವಾ ಯಾರಾದರೂ ಕೊಲೆ ನಡೆಸಿ ಮೃತದೇಹವನ್ನು ನದಿ ತಟದಲ್ಲಿ ಹಾಕಿರಬಹುದಾ ಎನ್ನುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಶಾಸಕರಿಗೇ ಬಿಗ್ ಶಾಕ್ ನೀಡಿದ ಭೂಕಳ್ಳರು ➤  ಶಾಸಕರ ನಿವೇಶನವನ್ನೇ ಕಬಳಿಸಿದ ಖದೀಮರು

error: Content is protected !!
Scroll to Top