➤ಖ್ಯಾತ ನಿರ್ಮಾಪಕ ಯಶ್‌‌ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ ನಿಧನ

(ನ್ಯೂಸ್ ಕಡಬ) newskadaba.com. ಮುಂಬಯಿ,ಏ.20. ಬಾಲಿವುಡ್‌ ನ ಖ್ಯಾತ ನಿರ್ಮಾಪಕ ಯಶ್‌ ಚೋಪ್ರಾ (74) ಅವರ ಪತ್ನಿ ಪಮೇಲಾ ಚೋಪ್ರಾ ಏ.20 ರಂದು ಮುಂಜಾನೆ ನಿಧನರಾಗಿದ್ದಾರೆ.

ಹಿನ್ನೆಲೆ ಗಾಯಕಿಯಾಗಿಯೂ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದ ಅವರು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ವೆಂಟಿಲೇಟೆರ್‌ ನಲ್ಲಿದ್ದ ಅವರು ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಯಶ್‌ ರಾಜ್‌ ಫಿಲ್ಮ್ಸ್‌ ಅಧಿಕೃತವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಇತ್ತೀಚೆಗೆ ಪಮೇಲಾ ಚೋಪ್ರಾ ಅವರು ಯಶ್‌ ರಾಜ್‌ ಫಿಲ್ಮ್ಸ್‌ ನ ಡಾಕ್ಯುಮೆಂಟರಿ ʼದಿ ರೊಮ್ಯಾಂಟಿಕ್ಸ್ʼ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ತನ್ನ ಪತಿ ಯಶ್‌ ರಾಜ್‌ ಅವರ ಸಿನಿಮಾ ಜರ್ನಿ ಬಗ್ಗೆ ಮಾತಾನಡಿದ್ದರು.‌  ಅವರಿಗೆ ಆದಿತ್ಯ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದಿತ್ಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ.ಆದಿತ್ಯ ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಉದಯ್ ಒಬ್ಬ ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.

Also Read  ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಪಾಪಿ ಮಗ        ➤ ಆರೋಪಿಯ ಬಂಧನ                                

ಹಿನ್ನೆಲೆ ಗಾಯಕಿಯೂ ಆಗಿದ್ದ ಅವರು, ಹಲವಾರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ತನ್ನ ಗಂಡನ ಸಿನಿಮಾವಾದ ʼಕಭಿ ಕಭಿʼ (1976), ʼಮುಜ್ಸೆ ದೋಸ್ತಿ ಕರೋಗೆʼ (2002) ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಇದಲ್ಲದೆ ಅವರು 1993 ರಲ್ಲಿ ಬಂದ ʼಐನಾʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

ಪಮೇಲಾ ಅವರು ತಮ್ಮ ಪತಿ ಯಶ್ ಚೋಪ್ರಾ, ಅವರ ಪುತ್ರ ಆದಿತ್ಯ ಚೋಪ್ರಾ ಮತ್ತು ವೃತ್ತಿಪರ ಲೇಖಕಿ ತನುಜಾ ಚಂದ್ರ ಅವರೊಂದಿಗೆ ಸೇರಿ 1997 ರ ತನ್ನ ಪತಿಯ ಚಲನಚಿತ್ರ ʼದಿಲ್ ತೋ ಪಾಗಲ್ ಹೈʼ ಚಿತ್ರದ ಸ್ಕ್ರಿಪ್ಟ್ ಬರೆದಿದ್ದರು. ʼದಿಲ್ ತೋ ಪಾಗಲ್ ಹೈʼ ಚಿತ್ರದ ʼಏಕ್ ದುಜೆ ಕೆ ವಾಸ್ತೆʼ ಹಾಡಿನಲ್ಲಿ ತನ್ನ ಪತಿಯೊಂದಿಗೆ ಕಾಣಿಸಿಕೊಂಡಿದ್ದರು.

Also Read  ಮಳೆ ನೀರು ನುಗ್ಗಿದ ಮನೆಗಳಿಗೆ 10,000 ರೂ. ಪರಿಹಾರ ನೀಡುತ್ತೇವೆ.!➤ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

 

 

error: Content is protected !!
Scroll to Top