ಮಕ್ಕಳಿಗೆ ಸರ್ಕಾರಿ ಹುದ್ದೆ ಸಿಗಲಿಲ್ಲ ಎಂದು ತಂದೆ ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com. ಕಲ್ಬುರ್ಗಿ,ಏ.20. ತಾಲೂಕಿನ ಕುರಿಕೋಟಾ ಬ್ರಿಡ್ಜ್ ಮೇಲಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಚನ್ನಬಸಪ್ಪ ಮೇಲಕೇರಿ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಮೊಬೈಲ್‌ ಸ್ಟೇಟಸ್‌ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋ ವಿಚಾರ ಅಪ್‌ಲೋಡ್‌ ಮಾಡಿ ನದಿಗೆ ಹಾರಿ ಸಾವನ್ನಪ್ಪಿದ್ದಾರೆ. ಇತನು ಮೂಲತಃ ನಾಗೂರು ಗ್ರಾಮದವರು, ವಿವೇಕಾನಂದ ನಗರದಲ್ಲಿ ವಾಸವಿದ್ದು ಎಲ್ಲೈಸಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.

ಮನೆಯಲ್ಲಿ ತನ್ನ ಇಬ್ಬರು ಮಕ್ಕಳು, ತನ್ನಸಹೋದರರ ಮಕ್ಕಳು ಯಾರೂ ಕೂಡ ಸರ್ಕಾರಿ ಹುದ್ದೆ ಸೇರಲಿಲ್ಲವೆಂದು ಮನನೊಂದು. ಕಲಬುರ್ಗಿಯ ವಿವೇಕಾನಂದ ನಗರ ದ ಮನೆಯಿಂದ ತೆರಳಿದ ರಾತ್ರಿ 11 ಗಂಟೆ ಆದರೂ ಮನೆಗೆ ಬರಲಿಲ್ಲವೆಂದು ಪತ್ನಿ ಫೋನ್‌ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿರುವುದನ್ನು ತಿಳಿದು ಚನ್ನಬಸಪ್ಪ ಅವರ ಫೋನ್‌ ಸ್ಟೇಟಸ್‌ ನೋಡಿದಾಗ ಸ್ಟೇಟಸ್‌ನಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹಾಕಿಕೊಂಡಿದ್ದನ್ನು ಮನೆಯವರು ಗಮನಿಸಿದ್ದಾರೆ.

Also Read  ಡಿ.16 ರಂದು ಕಡಬದಲ್ಲಿ ನಡೆಯಲಿರುವ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ► ಸರ್ವಾಧ್ಯಕ್ಷರಾಗಿ ಅಂಕಣಕಾರ ನಾ. ಕಾರಂತ ಪೆರಾಜೆ ಆಯ್ಕೆ

 

error: Content is protected !!
Scroll to Top