ಸರಕಾರಿ ನೌಕರರಿಗೆ ರಾಜ್ಯ ಸರಕಾರದಿಂದ ಬಂಪರ್ ಗಿಫ್ಟ್ ► ವಾರದಲ್ಲಿ ಐದು ದಿನ ಕೆಲಸ, ಕನಿಷ್ಠ 16 ಸಾವಿರ – ಗರಿಷ್ಠ 1 ಲಕ್ಷ 32 ಸಾವಿರ ಸಂಬಳ ನಿಗದಿ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.12. ರಾಜ್ಯ ಸರಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲು ಕೊನೆಗೂ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿದ್ದು, ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡುವುದು ಖಚಿತವಾಗಿದೆ.

ಹಲವು ವರ್ಷಗಳಿಂದ ಸರಕಾರಿ ನೌಕರರು ಸಲ್ಲಿಸುತ್ತಿದ್ದ ಬೇಡಿಕೆಯನ್ನು ಆಡಳಿತದ ಕೊನೆಯಲ್ಲಿ ಘೋಷಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಬಾರಿ ಅಧಿಕಾರ ಹಿಡಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಹ್ಮಾಸ್ತ್ರ ಸಿದ್ಧಪಡಿಸಿದ್ದಾರೆ. ಸರಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ನಿರ್ವಹಿಸಿ ಶನಿವಾರ ಮತ್ತು ಭಾನುವಾರ ರಜೆ ನೀಡುವ ಯೋಜನೆಯೊಂದಿಗೆ ಹೆಚ್ಚುವರಿ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ. ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಮಾಡಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರ ಸಂಬಳಕ್ಕೆ ಕಡಿಮೆಯಿಲ್ಲವೆಂಬಂತೆ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಮೊತ್ತ 16,350 ರೂ. ಹಾಗೂ ಗರಿಷ್ಠ ವೇತನವನ್ನು 1,32,925 ರೂ.ಗೆ ಏರಿಕೆ ಮಾಡಲಾಗಿದೆ.

Also Read  ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು.!➤ಪ್ರಕರಣ ದಾಖಲು

ಡಿ ಗ್ರೂಪ್ ನೌಕರರಿಗೆ 16,350 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಎಫ್‍ಡಿಐ ಶ್ರೇಣಿಗೆ 28,125 ರೂ., ಬಿ ಗ್ರೂಪ್ ನೌಕರರಿಗೆ 39,425 ರೂ. ಹಾಗೂ ಎ ಗ್ರೂಪ್ ನೌಕರರಿಗೆ 48,625 ರೂ., ವೇತನವನ್ನು ನಿಗದಿಪಡಿಸಲಾಗಿದೆ. ಐಎಎಸ್ ಯೇತರ ಅಧಿಕಾರಿಗಳಿಗೆ 95,325 ರೂ. ವೇತನ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

Also Read  ಸುಳ್ಯ: ಗೋದಾಮು ಕಟ್ಟಡಕ್ಕೆ ಬೆಂಕಿ- ಕೃಷಿಕ ಸಜೀವ ದಹನ..!! ➤ ಆತ್ಮಹತ್ಯೆ ಶಂಕೆ

error: Content is protected !!
Scroll to Top