➤ ತುಮಕೂರು ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮಕ್ಕಳು ಮೃತ್ಯು..!

(ನ್ಯೂಸ್ ಕಡಬ) newskadaba.com. ತುಮಕೂರು,ಏ.20. ಮನೆಯ ಮೇಲೆ ಆಟವಾಡಿಕೊಳ್ಳಿ ಎಂದು ಕಳುಹಿಸಿದರೆ, ಮನೆಯ ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ತುಮಕೂರಿ ಬೆಳಗುಂಬಾದ ಸಿದ್ದರಾಮಶ್ವರ ಬಡಾವಣೆಯಲ್ಲಿ ನಡೆದಿದೆ.

ವಿದ್ಯುತ್ ಸ್ಪರ್ಶಿ ಇಬ್ಬರು ಮಕ್ಕಳ ಸಾವನ್ನಪ್ಪಿದ್ದು, ಪ್ರಜ್ವಲ್ (14) ಹಾಗೂ ಯತೀಶ್ (14) ಮೃತರು ಎಂದು ತಿಳಿದು ಬಂದಿದೆ. ಈ ಇಬ್ಬರೂ ಮಕ್ಕಳು 8 ತರಗತಿ ಓದುತ್ತಿದ್ದರು. ಮೃತ ಯತೀಶ್, ವೀರಭದ್ರಯ್ಯ ಎಂಬುವ ಮಗನಾಗಿದ್ದು, ಪ್ರಜ್ವಲ್‌ ಪಕ್ಕದ ಮನೆಯ ಸಿದ್ದಲಿಂಗಯ್ಯ ಎಂಬುವ ಮಗನಾಗಿದ್ದಾನೆ. ಇಬ್ಬರು ಅಕ್ಕಪಕ್ಕದ ಮನೆ ನಿವಾಸಿಗಳು. ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಆಟವಾಡುತ್ತಿದ್ದರು. ಆದರೆ, ಮನೆಯೊಳಗೆ ಬಿಟ್ಟು ಹೊರಗೆ ಹೋಗಿ ಆಟವಾಡಿಕೊಳ್ಳುವಂತೆ ಮನೆಯವರು ಕಳುಹಿಸಿದ್ದಾರೆ. ಹೀಗಾಗಿ, ಮನೆಯ ಮೇಲೆ ಹೋಗಿ ಆಟವಾಡುವಾಗ ವಿದ್ಯುತ್‌ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Also Read  ಬಜ್ಪೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಆರ್ಕೊ ಮೈದಾನದಲ್ಲಿ ಕ್ರೀಡಾಕೂಟ

ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ:  ತುಮಕೂರಿ ಬೆಳಗುಂಬಾದ ಸಿದ್ದರಾಮಶ್ವರ ಬಡಾವಣೆಯಲ್ಲಿ ಘಟನೆ ನಡೆದಿದೆ. ಇನ್ನು ಮನೆಯಲ್ಲಿ ಇತ್ತಿಚೆಗೆ ಕಟ್ಟಿ ಗೃಹ ಪ್ರವೇಶ ಮಾಡಲಾಗಿತ್ತು. ಇನ್ನು ಬೆಸ್ಕಾಂ ಸಿಬ್ಬಂದಿಗೆ ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್‌ ತಂತಿಗಳಿಗೆ ಪ್ಲಾಸ್ಟಿಕ್‌ ಪೈಪ್‌ಗಳನ್ನು ಅಳವಡಿಸಿ ವಿದ್ಯುತ್‌ ಶಾಕ್‌ ಉಂಟಾಗದಂತೆ ಕ್ರಮವಹಿಸಲು ಮನೆಯವರು ಮನವಿ ಮಾಡಿದ್ದರು. ಆದರೆ, ಮನೆಯವರು ಹೇಳಿದರೂ, ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದರು. ಈಗ ಮನೆಯ  ಮಕ್ಕಳು ವಿದ್ಯುತ್‌ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದು, ಬೆಸ್ಕಾಂ ಸಿಬ್ಬಂದಿ ವಿರುದ್ಧ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆಯೇ ಪೊಲೀಸರಿಗೆ ಘಟನೆಯ ವಿವರ ತಿಳಿಸಲಾಗಿದೆ. ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ನಂತರ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆಸ್ಪತ್ರೆಯ ಶವಾಗಾರದ ಮುಂದೆ ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

error: Content is protected !!
Scroll to Top