ನಿಷೇಧಿತ ಇ-ಸಿಗರೇಟ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಉಡುಪಿ, ಏ. 20. ಐ.ಟಿ.ಸಿ ಕಂಪೆನಿಯ ಗೋಲ್ಡ್ ಫ್ಲೇಕ್ ನಕಲಿ ಸಿಗರೇಟ್‌ಗಳು, ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್‌ ವಿರುದ್ಧ ಉಡುಪಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, 3 ಪ್ರಕರಣಗಳಲ್ಲಿ 4 ಆರೋಪಿಗಳನ್ನು ಬಂಧಿಸಿ 6,34,970 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಎಪ್ರಿಲ್ 17 ರಂದು ಪಡುಬಿದ್ರಿ ಪೊಲೀಸರು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 4,79,970 ರೂಪಾಯಿ ಮೌಲ್ಯದ ಇ ಸಿಗರೇಟ್ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.

error: Content is protected !!
Scroll to Top