(ನ್ಯೂಸ್ ಕಡಬ)Newskadaba.com ಮೂಡಿಗೆರೆ,ಏ.20 ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಜನ ಒಂದು ದಿನ ಅಧಿಕಾರದಿಂದ ಇಳಿಸುತ್ತಾರೆ. ನನಗೂ ಅಧಿಕಾರ ಶಾಶ್ವತ ಅಲ್ಲ. ಸುಮಲತಾ ಅವರಿಗೆ 2019ರ ಚುನಾವಣೆಯ ಗುಂಗಿನ ದುರಹಂಕಾರ ಇನ್ನೂ ಕಡಿಮೆಯಾಗಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಮನಗರದಲ್ಲೇ ಸ್ಪರ್ಧಿಸುವುದು ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆಂದು ಅಭಿಮಾನದಿಂದ ಹೇಳಿದ್ದಾರೆ.

ಇದಕ್ಕೆ ಸುಮಲತಾ ಅವರು ಮಂಡ್ಯದಲ್ಲಿ ನನಗೆ ಸವಾಲು ಹಾಕಿ ಸ್ಪರ್ಧಿಸಲು ಮುಂದಾಗಿದ್ದಾರೆ. ಸವಾಲು ಹಾಕಿ ಸೆಡ್ಡು ಹೊಡೆಯುತ್ತಾರೆ ಎಂದರೆ ಅವರಿಗೆ ದೇವೇಗೌಡ ಅವರ ಕುಟುಂಬದ ಮೇಲೆ ಧ್ವೇಷ ಸಾಧನೆಗೆ ಮುಂದಾಗಿರುವುದು ಸ್ಪಷ್ಟ.

Also Read  ಪರೀಕ್ಷೆಗೆ ತೆರೆಳುವಾಗ ಅಪಘಾತ ➤ ಆಸ್ಪತ್ರೆಯ ಬೆಡ್‌‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ…!

 

*ಸುಮಲತಾ ವಿರುದ್ಧ ಎಚ್ ಡಿಕೆ ಕಿಡಿ!!*

 

error: Content is protected !!
Scroll to Top