ಕಡಬ:ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ಗ್ಯಾಸ್ ಪಂಪ್ ಸಿಬ್ಬಂದಿ ವಾಗ್ವಾದ.!

(ನ್ಯೂಸ್ ಕಡಬ)Newskadaba.com ಕಡಬ,ಏ.20 ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ಗ್ಯಾಸ್ ಪಂಪ್ ಸಿಬ್ಬಂದಿ ವಾಗ್ವಾದ ನಡೆಸಿದರೆಂಬ ಸುದ್ದಿ ತಿಳಿದು  ಪಂಪ್ ಕಚೇರಿಯತ್ತ  ತಂಡೋಪತಂಡವಾಗಿ ಅಟೋಚಾಲಕರು ಜಮಾಯಿಸಿದ ಘಟನೆಯೋಂದು ನಡೆದಿದೆ.

ಕೆಲ ಸಮಯದ ಬಳಿಕ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರು. ಆಟೋ ಚಾಲಕರೊಂದಿಗೆ ಸಿಬ್ಬಂದಿ  ಉಡಾಫೆ ಉತ್ತರ ನೀಡಿದರೆಂಬ ವಿಚಾರಕ್ಕೆ ಆಟೋ ಚಾಲಕಮಾಲಕರು ದಿಡೀರ್ ಎಲ್ಪಿಜಿ ಪಂಪ್ ಮುಂದೆ ದೌಡಾಯಿಸಿದ್ದರು. ಆಟೋ ಚಾಲಕರಿಂದ ಪಡೆದ ಅಧಿಕ ದರವನ್ನು ವಾಪಾಸು ನೀಡುವುದಲ್ಲದೆ  ಸಿಬ್ಬಂದಿ ಕ್ಷಮೆ ಹೇಳಬೇಕೆಂದು ಹಠ ಹಿಡಿದಿದ್ದರು.

ಕೂಡಲೇ ಸೇಲ್ಸ್ ಮ್ಯಾನೇಜರ್ ಮಧ್ಯಪ್ರವೇಶಸಿ ಸಿಬ್ಬಂದಿಗಳಿಂದ ಆಗಿರುವ  ಪ್ರಮಾದವನ್ನು ಒಪ್ಪಿಕೊಂಡು, ಬೆಳಿಗ್ಗೆ 6 ಗಂಟೆಯಿಂದ 9 ಗಂಟೆ ತನಕ ಗ್ಯಾಸ್ ಹಾಕಿರುವ ಆಟೋಗಳಿಂದ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ತಮ್ಮ ವೈಯುಕ್ತಿಕ ಖಾತೆಯಿಂದ ನೀಡಿ  ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ರಾಜ್ಯ ಸರ್ಕಾರಿ ನೌಕರರ ಸಂಘ – ಜಿಲ್ಲಾ ಶಾಖೆ ಚುನಾವಣೆ

 

 

error: Content is protected !!
Scroll to Top