ಕಳಂಜಿಮಲೆ ಕಾಡಿನಲ್ಲಿ ಬೆಂಕಿ ಅನಾಹುತ ► ಕೋಟ್ಯಂತರ ಮೌಲ್ಯದ ಮರಗಳು ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 12. ಸಮೀಪದ ಕನ್ಯಾನ ಗ್ರಾಮದ ಕಳಂಜಿ ಮಲೆ ರಕ್ಷಿತಾರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು 10 ಎಕರೆಯಷ್ಟು ಜಾಗದಲ್ಲಿದ್ದ ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾದ ಘಟನೆ ಗುರುವಾರದಂದು ನಡೆದಿದೆ.

ಮಧ್ಯಾಹ್ನ ವೇಳೆಗೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡ್ಗಿಚ್ಚಿನಂತೆ ಹರಡಿ ಬೆಲೆಬಾಳುವ ಮರಗಳು ಭಾಗಶಃ ಸುಟ್ಟು ಹೋಗಿವೆ‌. ಬಂಟ್ವಾಳದಿಂದ ಅಗ್ನಿಶಾಮಕ ದಳ ಆಗಮಿಸಿದ್ದರೂ ಬೆಂಕಿ ತೀವ್ರತೆ ಹೆಚ್ಚಾಗಿದ್ದರಿಂದ ತಡರಾತ್ರಿ ವರೆಗೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕದಳದ ವಾಹನದಲ್ಲಿ ನೀರು ಖಾಲಿ ಆಗಿ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ 200 ಕ್ಕಿಂತಲೂ ಅಧಿಕ ಯುವಕರು ಬೆಂಕಿ ನಂದಿಸಲು ಕೈ ಜೋಡಿಸಿ, ಸ್ಥಳೀಯವಾಗಿ ನೀರು ಸಂಗ್ರಹಿಸಿ ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಗ್ರಾ.ಪಂ ಸದಸ್ಯೆಯ ಮೇಲೆ ಅಧ್ಯಕ್ಷರಿಂದ ದೌರ್ಜನ್ಯ ಆರೋಪ..!! ➤  ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ

ಘಟನೆಯನ್ನು ಅವಲೋಕಿಸಿದಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆಯಾ ಅಥವಾ ಕಿಡಿಗೇಡಿಗಳ ಕೃತ್ಯವಾಗಿದೆಯಾ ಎನ್ನುವ ಸಂಶಯ ಮೂಡಿದೆ.

error: Content is protected !!
Scroll to Top