ಯಡಿಯೂರಪ್ಪ, ಶೆಟ್ಟರಿಗೆ ಆಗಿರುವ ಗತಿ ಸಿಎಂ ಬೊಮ್ಮಾಯಿಗೂ ಆಗಲಿದೆ ➤ ಎಂ.ಬಿ.ಪಾಟೀಲ್

(ನ್ಯೂಸ್ ಕಡಬ) newskadaba.com. ಹುಬ್ಬಳ್ಳಿ, ಏ.19. ಬಿಜೆಪಿಯ ಕೆಲ‌ ನಾಯಕರು ಲಿಂಗಾಯತ ಸಮುದಾಯದ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದು, ಯಡಿಯೂರಪ್ಪ, ಶೆಟ್ಟರಿಗೆ ಆಗಿರುವ ಗತಿ ಸಿಎಂ ಬಸವರಾಜ ಬೊಮ್ಮಾಯಿಗೆ ಆಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮೂಲಕ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದ ಯಡಿಯೂರಪ್ಪ ಅವರನ್ನು ಏಕಾಏಕಿ ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಮಾಜಿ ಸಿಎಂ ಜಗದೀಶ ಶೆಟ್ಟರಗೆ ಸಕಾರಣ ಇಲ್ಲದೆಯೇ ಟಿಕೆಟ್ ನಿರಾಕರಿಸಲಾಯಿತು. ಲಕ್ಷ್ಮಣ ಸವದಿಗೂ ಟಿಕೆಟ್ ನೀಡಲಿಲ್ಲ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ವರ್ತನೆ ತೋರಲಾಗುತ್ತಿದೆ ಎಂದರು.

Also Read  ರಾತ್ರೋರಾತ್ರಿ ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ➤ ಆರೋಪಿಗಳು ಪರಾರಿ

ಇನ್ನು ಬಸವರಾಜ ಬೊಮ್ಮಾಯಿಗೂ ಯಡಿಯೂರಪ್ಪ, ಶೆಟ್ಟರಗಾದ ಸ್ಥಿತಿ ಬರಲಿದ್ದು, ನಾನು ಸಮಾಜದ ನಾಯಕನಾಗಿ ಮಾತನಾಡುತ್ತಿದ್ದೇನೆ ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು, ಅವಮಾನ ಮಾಡುವುದನ್ನು ಸಮಾಜ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.

error: Content is protected !!
Scroll to Top