ಏ.25 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.19. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಕರ್ನಾಟಕ ಬೋರ್ಡ್ ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಏಪ್ರಿಲ್ 2023 ರ ಅಂತ್ಯದ ವೇಳೆಗೆ ಪ್ರಕಟಿಸುವ ನಿರೀಕ್ಷೆಯಿದೆ.

ಈಗಾಗಲೇ ಮೌಲ್ಯಮಾಪನ ಬಹುತೇಕ ಪೂರ್ಣಗೊಂಡಿದ್ದು, ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈ ಹಿಂದೆ ಹೇಳಿದ್ದರು. ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಏಪ್ರಿಲ್ ಕೊನೆಯ ವಾರ ಅಂದರೆ, ಇದೇ ತಿಂಗಳ 25 ರಂದು ಫಲಿತಾಂಶ ಪ್ರಕಟಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಫಲಿತಾಂಶದ ಪ್ರಕಟಣೆಯ ದಿನಾಂಕ ಮತ್ತು ಸಮಯದ ಬಗ್ಗೆ ದೃಢೀಕರಣವನ್ನು ಮಂಡಳಿಯ ಅಧಿಕಾರಿಗಳು ಶೀಘ್ರದಲ್ಲೇ ಮಾಡುವ ನಿರೀಕ್ಷೆಯಿದೆ.

Also Read  ಹೆಣ್ಣುಭ್ರೂಣ ಪತ್ತೆ- ಹತ್ಯೆ ಪ್ರಕರಣ  ಮೂವರು ಆರೋಪಿಗಳು ಅರೆಸ್ಟ್..!   

error: Content is protected !!
Scroll to Top