ಕೋರಿಯರ್ ಕಂಪೆನಿಯವನೆಂದು ನಂಬಿಸಿ 72 ಸಾವಿರ ರೂ. ವಂಚನೆ   ➤ದೂರು ದಾಖಲು.!

(ನ್ಯೂಸ್ ಕಡಬ)Newskadaba.com ಮಂಗಳೂರು ,ಏ.19 ಅಪರಿಚಿತ ವ್ಯಕ್ತಿಯೋರ್ವ ಕೋರಿಯರ್ ಕಂಪೆನಿಯವನೆಂದು ನಂಬಿಸಿ ಲಿಂಕ್ ಕಳುಹಿಸಿ 72,444 ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಪ್ರಕರಣದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ದೂರುದಾರ ವ್ಯಕ್ತಿ ಹಣ ಪಾವತಿಸಿದರೂ, ಪಾರ್ಸೆಲ್ ಕೊಂಡು ಹೋಗಲು ಯಾರೂ ಬಂದಿರಲಿಲ್ಲ. ಕೊರಿಯರ್ ಕಂಪೆನಿಯವನೆಂದು ಪರಿಚಯಿಸಿಕೊಂಡ ವ್ಯಕ್ತಿ ಕಳುಹಿಸಿದ ಲಿಂಕ್‌ಗೆ ಬ್ಯಾಂಕ್‌ನ ವಿವರ ನೀಡಿದ್ದರಿಂದ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್

 

 

 

 

 

 

 

 

error: Content is protected !!
Scroll to Top