ತಡ ರಾತ್ರಿ ದನದಹಟ್ಟಿಗೆ ನುಗ್ಗಿದ ಚಿರತೆ..! ➤ ಚಿರತೆ ಹಾವಳಿಗೆ ಜನ ಕಂಗಾಲು!

(ನ್ಯೂಸ್ ಕಡಬ)Newskadaba.com  ಧರ್ಮಸ್ಥಳ,ಏ.18  ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಮನೆಯ ಸಮೀಪವಿದ್ದ ದನದ  ಹಟ್ಟಿಗೆ ನುಗ್ಗಿದ ಚಿರತೆ ಕಟ್ಟಿ ಹಾಕಿದ್ದ ದನವೊಂದನ್ನು ಕೊಂದು ತಿಂದ ಘಟನೆ ಬೆಳಕಿಗೆ ಬಂದಿದೆ. ತ್ರೇಸ್ಯಾಮ್ಮ ಪಿ.ಕೆ. ಎಂಬವರಿಗೆ ಸೇರಿದ ದನ ಇದಾಗಿದೆ.

ನೇರ್ತನೆಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಆನೆಗಳ ಹಾವಳಿ ತುಂಬಾ ಹೆಚ್ಚಾಗಿದೆ. ಕೃಷಿಕರು ಆತಂಕದಲ್ಲಿಯೇ ಬದುಕಬೇಕಾದ ಸ್ಥಿತಿ ಎದುರಾಗಿದೆ ಎಂದು ಇಲ್ಲಿನ ಜನರು ಮಾಹಿತಿ ನೀಡಿದ್ದಾರೆ.ಮುಂಡಾಜೆ ದುಂಬೆಟ್ಟು ಪರಿಸರದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊ‌ಡು ನಾಯಿಗಳನ್ನು ತಿಂದು ಹಾಕಿತ್ತು.

Also Read  ಕಡಬ: ಮುಸ್ಲಿಂ ಗೆಳತಿಯ ಮನೆಗೆ ಬಂದ ಹಿಂದೂ ಸ್ನೇಹಿತೆ ➤ ಹಿಂದೂ ಯುವಕರಿಂದ ಕೊಲೆ ಬೆದರಿಕೆ ಆರೋಪ - ನಾಲ್ವರ ವಿರುದ್ಧ ಕೇಸ್

ಆ ಪರಿಸರದಿಂದ ಚಿರತೆ ಇಲ್ಲಿಗೆ ಬಂದಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ‌.ಕಾಡುಪ್ರಾಣಿಗಳ ಉಪಟಳದಿಂದಾಗಿ ಸ್ಥಳೀಯ ಜನರು ರಾತ್ರಿ ಹಾಗೂ ಬೆಳಗ್ಗಿನ ಜಾವ ಮನೆಗಳಿಂದ ಹೊರ ಬರಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.

 

 

 

error: Content is protected !!
Scroll to Top