(ನ್ಯೂಸ್ ಕಡಬ)Newskadaba.com ನವದೆಹಲಿ,ಏ.18 ಮೃತ ಗಂಡನ ಪೋಷಕರಿಗೆ ಸೊಸೆ ಜೀವನಾಂಶ ಕೊಡಬೇಕಾಗಿಲ್ಲ ಎಂದು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ಪ್ರಕರಣವೊಂದರಲ್ಲಿ ತನ್ನ ಆದೇಶದಲ್ಲಿ ಈ ಆದೇಶ ನೀಡಿದೆ. ಶೋಭಾ ತಿಡ್ಕೆ ಎಂಬ 38 ವರ್ಷದ ಮಹಿಳೆ ಸಲ್ಲಿಸಿದ್ದ ಅರ್ಜಿಯಲ್ಲಿ ಪೀಠ ಈ ಆದೇಶ ನೀಡಿದೆ.
ಸ್ಥಳೀಯ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದರು.ಶೋಭಾ ತಿಡ್ಕೆ ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಕಿಶೋರ್ ಸಂತ ಅವರ ಏಕ ಪೀಠವು ಈ ಆದೇಶವನ್ನು ನೀಡಿತು.
