ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ 13 ಮಂದಿ ಸಾವು..!   ➤ಇನ್ನು ಕೆಲವರು ಆಸ್ಪತ್ರೆಗೆ ದಾಖಲು!

(ನ್ಯೂಸ್ ಕಡಬ)Newskadaba.com ಮಹಾರಾಷ್ಟ್ರ,ಏ.18  ‘ಸಮಾಜ ಸುಧಾರಕ ಅಪ್ಪಾಸಾಹೇಬ್‌ ಧರ್ಮಾಧಿಕಾರಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ‍ಪ್ರಶಸ್ತಿ ಪ್ರದಾನ ಮಾಡಲು ಮಹಾರಾಷ್ಟ್ರ ಸರ್ಕಾರ ಆಯೋಜಿಸಿದ್ದ ಸಮಾರಂಭದ ವೇಳೆ ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ ಬಳಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಮತ್ತೆ ಇಬ್ಬರು ಅಸುನೀಗಿದ್ದಾರೆ.

ಇದರೊಂದಿಗೆ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಾರ್‌ಘರ್‌ ಪ್ರದೇಶದಲ್ಲಿ ನಡೆದಿದ್ದ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು ಈ ವೇಳೆ 11 ಜನ ಮೃತಪಟ್ಟಿದ್ದರು.’ಕಾಮೋಟೆಯಲ್ಲಿರುವ ಎಂಜಿಎಂ ಆಸ್ಪತ್ರೆಯಲ್ಲಿ ಎಂಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ➤ ಹಲವು ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ!

 

 

error: Content is protected !!
Scroll to Top