ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್

(ನ್ಯೂಸ್ ಕಡಬ)newskadaba.com ತಿರುವನಂತಪುರಂ, ಏ.18. ಹೇರಳವಾದ ನದಿ, ತೊರೆ, ಹಿನ್ನೀರು ಹಾಗೂ ಉತ್ತಮ ಪ್ರಮಾಣದ ಮಳೆಯು ಕೇರಳವನ್ನು ಹಚ್ಚ ಹಸಿರನ್ನಾಗಿರಿಸಿದರೂ, ಈ ರಾಜ್ಯದ ಅನೇಕ ಭಾಗಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕಾಗಿಯೇ ದೇಶದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್ ಘೋಷಿಸಲಾಗಿದೆ.


ರಾಜ್ಯದ 15 ಬ್ಲಾಕ್ ಪಂಚಾಯತ್ ಗಳ 94 ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಮೊದಲ ಹಂತದ ನೀರಿನ ಬಜೆಟ್ ನ ವಿವರಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸಲು ಈ ಬಜೆಟ್ ಅನ್ನು ತರಲಾಗುತ್ತಿದೆ “ಎಂದು ಹೇಳಿದ್ದಾರೆ.

Also Read  ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ… ➤ ವೀರೇಂದ್ರ ಸೆಹ್ವಾಗ್!

error: Content is protected !!
Scroll to Top