ಗೂಂಡಾ ಕಾರ್ಯಕರ್ತರಿಂದ  ಅನಿಲ್‌ ಪಿ.ಮೆಣಸಿನಕಾಯಿ ಕಾರಿನ ಗಾಜಿಗೆ ಕಲ್ಲು ತೂರಾಟ.!

(ನ್ಯೂಸ್ ಕಡಬ)Newskadaba.comದಗ,ಏ.18 ನಾಮಪತ್ರ ಸಲ್ಲಿಸಿ ಹೊರಬರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲವು ಗೂಂಡಾ ಕಾರ್ಯಕರ್ತರು ನನ್ನ ಕಾರಿನ ಗಾಜಿಗೆ ಕಲ್ಲು ಎಸೆದರು. ಚಪ್ಪಲಿ ತೂರಿದರು. ಕೆಲವರು ಕುಡಿಯುತ್ತಿದ್ದ ಮಜ್ಜಿಗೆಯನ್ನು ಕಾರಿನ ಮೇಲೆ ಉಗುಳಿದರು’ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಪಿ.ಮೆಣಸಿನಕಾಯಿ ಆರೋಪ ಮಾಡಿದರು.

ಬಿಜೆಪಿ ಮುಖಂಡ ರಾಜು ಕುರಡಗಿ ಮಾತನಾಡಿ, ‘ನಾಮಪತ್ರ ಸಲ್ಲಿಸಲು ಹೋದಾಗ ಹಲ್ಲೆ ನಡೆಸಿದ್ದಾರೆ ಅಂದರೆ, ಕಾಂಗ್ರೆಸ್‌ ನಾಯಕರಿಗೆ ಸೋಲಿನ ಭೀತಿ ಕಾಡುತ್ತಿದೆ. ಗೂಂಡಾಗಿರಿ ರಾಜಕೀಯಕ್ಕೆ ಯಾರೂ ಹೆದರುವುದಿಲ್ಲ. ಎಲ್ಲರೂ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಹೇಳಿದರು.

Also Read  ಮಂಗಳೂರು, ಶಿವಮೊಗ್ಗ ಬಾಂಬ್ ಸ್ಫೋಟ ಪ್ರಕರಣ ➤ ಮತ್ತೊಬ್ಬ ಸೆರೆ..!!

 

 

 

error: Content is protected !!
Scroll to Top