ದೆಹಲಿ ಮೇಯರ್- ಉಪಮೇಯರ್ ಚುನಾವಣೆ ➤ ಅಭ್ಯರ್ಥಿಗಳನ್ನು ಘೋಷಿಸಿದ ಆಪ್

(ನ್ಯೂಸ್ ಕಡಬ) newskadaba.com. ನವದೆಹಲಿ, .17. ಏಪ್ರಿಲ್​ 26ರಂದು ದೆಹಲಿ ಮುನ್ಸಿಪಾಲ್​ ಕೌನ್ಸಿಲ್​​(MCD)ನ ಮೇಯರ್​, ಉಪಮೇಯರ್​ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಆಮ್​ ಆದ್ಮಿ ಪಕ್ಷ ತನ್ನ ಹುರಿಯಾಳುಗಳನ್ನು ಘೋಷಿಸಿದೆ.

ಹಾಲಿ ಮೇಯರ್​ ಶೆಲ್ಲಿ ಓಬೆರಾಯ್​ ಹಾಗೂ ಉಪಮೇಯರ್​ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಅಭ್ಯರ್ಥಿಗಳೆಂದು ಎಎಪಿ ನಾಯಕ ಸಂಜಯ್​ ಸಿಂಗ್ ಘೋಷಿಸಿದ್ಧಾರೆ.  ಈ ಕುರಿತು ಮಾತನಾಡಿದ ಸಂಜಯ್​ ಸಿಂಗ್​ ನಾವು ಮೇಯರ್ ಹಾಗೂ ಉಪಮೇಯರ್​ ಚುನಾವಣೆಗೆ ಶೆಲ್ಲಿ ಒಬೆರಾಯ್​ ಹಾಗೂ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಆಯ್ಕೆ ಮಾಡಿದ್ದೇವೆ. ಕಳೆದ ಭಾರಿ ಚುನಾವಣೆ ಸಮಯದಲ್ಲಿ ಬಿಜೆಪಿಯ ಗದ್ದಲದ ನಡುವೆ ನಮ್ಮ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಈ ಭಾರಿಯೂ ಕೂಡ ನಮ್ಮ ಅಭ್ಯರ್ಥಿಗಳು ಕೂಡ ಜಯಗಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Also Read  ತರಗತಿಯಲ್ಲಿ ನಿದ್ದೆಗೆ ಜಾರಿದ ವಿದ್ಯಾರ್ಥಿ: ಕೊಠಡಿಗೆ  ಬೀಗ ಹಾಕಿದ ಶಿಕ್ಷಕಿ

 

error: Content is protected !!
Scroll to Top