ಮಂಗಳೂರು: ಕಳೆದುಹೋದ ಮೊಬೈಲ್ ಪತ್ತೆಗಾಗಿ ವಾಟ್ಸಪ್ ಸಹಾಯ ವಾಣಿ

(ನ್ಯೂಸ್ ಕಡಬ) newskadaba.com. ಮಂಗಳೂರು, .17.  ಮೊಬೈಲ್‌ ಕಳೆದುಹೋದರೆ ಇನ್ಮುಂದೆ ತಲೆಕೆಡಿಸಿಕೊಳ್ಳುಬೇಕು ಎಂದಿಲ್ಲ CEIR ಪೋರ್ಟಲ್ ಮೂಲಕ ನಿಮ್ಮ ಮೊಬೈಲ್‌ ನ್ನು ಸುಲಭವಾಗಿ ಪತ್ತೆ ಹಚ್ಚಬಹುದು.  ಕಳೆದುಹೋದ ಮೊಬೈಲ್ ಗಳ ಪತ್ತೆಗೆ ಈಗಾಗಲೇ CEIR ಪೋರ್ಟಲ್ ಕಾರ್ಯಾಚರಿಸುತ್ತಿದ್ದು, ಅದನ್ನು ಬಳಸಿ ಮಂಗಳೂರು ನಗರದಲ್ಲಿ ಇದುವರೆಗೆ 200ಕ್ಕೂಅಧಿಕ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ.

ಇನ್ನು ಜನರಿಗೆ ಸಹಾಯಕ್ಕಾಗಿ ವಾಟ್ಸಪ್ ನಂಬರ್ ಸೇವೆ ಮಂಗಳೂರಿನಲ್ಲಿ ಆರಂಭಿಸಲಾಗಿದ್ದು, ಮೊಬೈಲ್ ಕಳೆದುಕೊಂಡವರು ಪೋರ್ಟಲ್ ನಲ್ಲಿ ನೇರವಾಗಿ ಮಾಹಿತಿ‌ ನೀಡಬಹುದು. ಇಲ್ಲವಾದರೆ 8277949183 ವಾಟ್ಸಪ್ ನಂಬರ್ ಗೆ ‘hi’ ಮೆಸೇಜ್ ಮಾಡಿದರೆ ಪೊಲೀಸರೆ ಲಿಂಕ್ ಕಳುಹಿಸಿ ಯಾವ ರೀತಿ ಮಾಹಿತಿ ಅಪ್ ಲೋಡ್ ಮಾಡಬೇಕೆಂಬುದನ್ನು ತಿಳಿಸುತ್ತಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.

Also Read  ನ.16ರಂದು ಗಡಿನಾಡ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ

 

 

error: Content is protected !!
Scroll to Top