ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ನಂ.1 ಶ್ರೀಮಂತ ದೇವಸ್ಥಾನ ➤ 123 ಕೋಟಿ ರೂ. ಆದಾಯ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ, .17. ನಾಗಾರಾಧನೆಗೆ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಈ ಬಾರಿಯೂ 123 ಕೋಟಿ ರೂ. ಆದಾಯ ಗಳಿಸಿದೆ.  2022ರ ಏಪ್ರಿಲ್‌ನಿಂದ 2023ರ ಮಾ.31ರವರೆಗಿನ ಆರ್ಥಿಕ ವರ್ಷದಲ್ಲಿ 123,64,49,480 ರೂ. ಆದಾಯ ಗಳಿಸಿದೆ. ದೇವಾಲಯಕ್ಕೆ ಹರಕೆ ಸೇವೆ, ಕಾಣಿಕೆ ಮಾತ್ರವಲ್ಲದೇ ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಕೃಷಿ ತೋಟದಿಂದಲೂ ಆದಾಯ ಬರುತ್ತದೆ.

ಕೊರೊನಾ ಸಾಂಕ್ರಮಿಕದ ಹಿನ್ನಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಭಂಧವಿದ್ದ ಕಾರಣ 2021-22ನೇ ಸಾಲಿನಲ್ಲಿ ಕೇವಲ 72,73,23,758 ರೂ. ಆದಾಯ ಪಡೆದಿತ್ತು. ಕುಕ್ಕೆ 2007ರಿಂದೀಚೆಗೆ ಹೆಚ್ಚಿನ ಆದಾಯ ಪಡೆಯುವ ಮೂಲಕ ರಾಜ್ಯದ ಶ್ರೀಮಂತ ದೇವಳವಾಗಿ ಗುರುತಿಸಿಕೊಂಡಿದೆ. ಅದಾಯ ಗಳಿಸುವ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.

error: Content is protected !!
Scroll to Top