ಸ್ವಚ್ಚಗೊಳಿಸಲೆಂದು ಬಾವಿಗೆ ಇಳಿದ ವ್ಯಕ್ತಿ ➤ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾರ್ಕಳ, .17. ಸ್ವಚ್ಚಗೊಳಿಸಲೆಂದು ಬಾವಿಗೆ ಇಳಿದ ವ್ಯಕ್ತಿ ಮೇಲೆ ಹತ್ತಲು ಸಾಧ್ಯವಾಗದೇ ಅಗ್ನಿಶಾಮಕ ದಳವು ರಕ್ಷಿಸಿದ ಘಟನೆ ನಗರದ ಬಂಡೀಮಠ ಪರಿಸರದಲ್ಲಿ ನಡೆದಿದೆ.  ಬಂಡಿಮಠ ಬಳಿ ಗೋಪನಾಥ ಪುರಾಣಿಕ್ ರವರಿಗೆ ಸೇರಿದ ಬಾವಿಯಲ್ಲಿ ಪವನ್ ಪೂಜಾರಿ(32)ಎಂಬವರು ಸಿಲುಕಿಕೊಂಡಿದ್ದರು. ಅವರು ಬಾವಿಯ ಸ್ವಚತೆಗಾಗಿ ಇಳಿದು, ಮೇಲಕ್ಕೆ ಬರಲಾಗದೇ ಅಶಕ್ತರಾಗಿ ಉಳಿದುಕೊಂಡಿದ್ದಾರೆಂಬ ಮಾಹಿತಿಯು ಅಗ್ನಿಶಾಮಕ ದಳಕ್ಕೆ ತಲುಪಿತು. ಅದರ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ದಾವಿಸಿ ವ್ಯಕ್ತಿಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ.

Also Read  ಮಂಗಳೂರು: ರೈಲ್ವೇ ನೌಕರರಿಗೆ ನಕಲಿ ಸರ್ಟಿಫಿಕೇಟ್ ನೀಡಿದ್ದ ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ..!!

ಕಾರ್ಯಾಚರಣೆಯಲ್ಲಿ,  ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಂ ಸಂಜೀವ್,ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್, ಜಯಮೂಲ್ಯ, ನಿತ್ಯಾನಂದ ಬಸವರಾಜ್,ಭೀಮಪ್ಪ ಪಾಲ್ಗೊಂಡಿದ್ದರು.

error: Content is protected !!
Scroll to Top