(ನ್ಯೂಸ್ ಕಡಬ)newskadaba.com ಮುಂಬಯಿ, ಏ.15. ಮಹಾರಾಷ್ಟ್ರದಲ್ಲಿ ನಸುಕಿನಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತ ದುರಂತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.
ಇನ್ನೂ 27 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ರಾಯಗಡ ಜಿಲ್ಲೆಯಲ್ಲಿ ಹಳೆ ಮುಂಬಯಿ- ಪುಣೆ ಹೆದ್ದಾರಿಯಲ್ಲಿನ ಕಂದಕಕ್ಕೆ ಬಸ್ ಉರುಳಿ ಬಿದ್ದು ಈ ಅಪಘಾತ ಸಂಭವಿಸಿದೆ.
