ಕಾಸರಗೋಡು: 67 ಲಕ್ಷ ರೂ. ಹಣ ಸಹಿತ ಓರ್ವ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.14. ಸುಮಾರು 67 ಲಕ್ಷ ರೂ. ಹವಾಲ ಹಣ ಸಹಿತ ಓರ್ವನನ್ನು DYSP ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಬಂಧಿಸಿದೆ.

ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹವಾಲ ಹಣ ಪತ್ತೆಯಾಗಿದೆ. ಪುಂಜಾವಿ ಯ ಹಾರಿಸ್ (39) ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

error: Content is protected !!
Scroll to Top