ಒಂದು ಸಾಲಿನ ತೀರ್ಪು ಕೊಡುತ್ತಿದ್ದ ಕರ್ನಾಟಕದ ಜಡ್ಜ್‌ ವಜಾ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.13. ಪೂರ್ಣ ಆದೇಶ ಸಿದ್ಧಪಡಿಸದೆ ಅಥವಾ ಬರೆಸದೆ ಕೇವಲ ತೀರ್ಪಿನ ಕೊನೆಯ ಸಾಲನ್ನಷ್ಟೇ ಪ್ರಕಟಿಸುತ್ತಿದ್ದ ಕರ್ನಾಟಕದ ಜಾರಿ ನ್ಯಾಯಾಲಯದ ನ್ಯಾಯಾಧೀಶ ಒಬ್ಬರನ್ನು ಸುಪ್ರೀಂಕೋರ್ಟ್‌ ಸೇವೆಯಿಂದ ವಜಾಗೊಳಿಸಿದೆ.


ಈ ಜಡ್ಜ್‌ ಸಂಪೂರ್ಣ ಆದೇಶ ಸಿದ್ಧಪಡಿಸದೆ ಕೇವಲ ತೀರ್ಪಿನ ಕೊನೆಯ ಭಾಗವನ್ನು ಮಾತ್ರ ತೆರೆದ ನ್ಯಾಯಾಲಯದಲ್ಲಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಪೀಠ ಆದೇಶಿಸಿದೆ.


ಹೈಕೋರ್ಟ್‌ನ ಪೂರ್ಣ ಪೀಠ ವಜಾಗೊಳಿಸಿದ್ದರೂ ವಿಭಾಗೀಯ ಪೀಠವು ಅವರನ್ನು ಮರುನೇಮಕಗೊಳಿಸಲು ನೀಡಿದ್ದ ಆದೇಶಕ್ಕೆ ಸುಪ್ರೀಂ ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದೆ.

Also Read  ಬೆಳ್ತಂಗಡಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ - ಮೂವರು ಆರೋಪಿಗಳ ಬಂಧನ

 

error: Content is protected !!
Scroll to Top