(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.13. ದೂರು ನೀಡಲು ಠಾಣೆಗೆ ಬಂದ ಮಹಿಳೆಯ ಸೊಂಟ ಹಿಡಿದು ಕಿರುಕುಳ ನೀಡಿ ಅನುಚಿತ ವರ್ತನೆ ಆರೋಪ ಪ್ರಕರಣ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಠಾಣೆಯ ಪಿಎಸ್ಐ ಮಂಜುನಾಥ್ ವಿರುದ್ಧ ಕೇಸ್ ದಾಖಲಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅನುಚಿತ ವರ್ತನೆ ಮಾಡಿದ್ದಾರೆಂದು ಮಹಿಳೆಯು ಟ್ವೀಟ್ ಮಾಡಿದ್ದರು. ಬಳಿಕ ಪಿಎಸ್ಐ ಮಂಜುನಾಥ್ ವಿರುದ್ಧ ದೂರು ಸಹ ನೀಡಿದ್ದರು. ಈ ಕುರಿತಾಗಿ ಮಾತನಾಡಿದ ಡಿಸಿಪಿ ಸಿ.ಕೆ.ಬಾಬಾ, ನಮ್ಮ ಕಚೇರಿಯಿಂದ ಮಹಿಳೆಯನ್ನು ಸಂಪರ್ಕ ಮಾಡಿದ್ದೆವು. ಎಫ್ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕೆಂದು ಹೇಳಿದ್ದೆವು. ನಿನ್ನೆ ಸಂಜೆ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಹೇಳಿದರು.