ಉಪ್ಪಿನಂಗಡಿ: ತಾಯಿ – ಮಗು ನಾಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.11. ಮನೆಯಿಂದ ಹೊರ ಹೋಗಿರುವ ತಾಯಿ ಮತ್ತು ಮಗು ಹಿಂತಿರುಗಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಜನವರಿ 8 ರಂದು ಅಡ್ಡಹೊಳೆ ಎಂಬಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ತೆಕ್ಕೆಕೆರೆ ಪುತ್ತನ್ಪುರ ಅಡ್ಡಹೊಳೆ ನಿವಾಸಿ ಜೆಸ್ಲಿನ್(23) ಮತ್ತು ಪುತ್ರಿ ಲಿಯೊನಾ ಎಂದು ಗುರುತಿಸಲಾಗಿದೆ. ಇವರು ಜನವರಿ 8 ರಂದು ಬೆಳಿಗ್ಗೆ 6 ಗಂಟೆಗೆ 12 ಸಾವಿರ ರೂ. ನಗದು ಹಾಗೂ ಚಿನ್ನವನ್ನು ತೆಗೆದುಕೊಂಡು ಹೋಗಿದ್ದು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. 5.2 ಅಡಿ ಉದ್ದವಿದ್ದು, ಗೋದಿ ಮೈ ಬಣ್ಣ ಹೊಂದಿರುವ ಇವರು, ಹಸಿರು ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಇರುವ ಚೂಡಿದಾರ ಧರಿಸಿದ್ದು, ತುಳು, ಕನ್ನಡ, ಮಲಯಾಳಂ, ಮಾತನಾಡುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಪ್ಪಿನಂಗಡಿ ಪೊಲೀಸು ಠಾಣೆ ದೂರವಾಣಿ ಸಂಖ್ಯೆ: 08251-251055 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಜಿಲ್ಲಾ ಹಾಗೂ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ

error: Content is protected !!
Scroll to Top