ಹಣಕ್ಕಾಗಿ 2 ವರ್ಷದ ಮಗುವನ್ನು ಹತ್ಯೆ ಮಾಡಿ ಚೀಲದಲ್ಲಿ ಬಚ್ಚಿಟ್ಟ ಪಾಪಿ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.13. ಗ್ರೇಟರ್ ನೋಯ್ಡಾದಲ್ಲಿ ಹಣಕ್ಕಾಗಿ ಎರಡು ವರ್ಷದ ಬಾಲಕಿಯನ್ನು ಕೊಂದು ಚೀಲದಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ರಾಘವೇಂದ್ರನನ್ನು ಇದೀಗ ಬಂಧಿಸಲಾಗಿದೆ.


ಆರೋಪಿ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ರಾಘವೇಂದ್ರ ಕೆಲ ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಪತಿ ತನ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು 10 ಲಕ್ಷ ರೂ. ಇಟ್ಟಿರುವುದಾಗಿ ಬಾಲಕಿಯ ತಂದೆ ಮಂಜು ಹೇಳುವುದನ್ನು ರಾಘವೇಂದ್ರ ಕೇಳಿಸಿಕೊಂಡಿದ್ದಾನೆ. ಹಣದ ಅವಶ್ಯಕತೆಯಿದ್ದ ರಾಘವೇಂದ್ರ ಬಾಲಕಿಯನ್ನು ಅಪಹರಿಸಿದ್ದಾನೆ.

Also Read  ಮಂಗಳೂರಿನ ಕಡಲಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸೂಟಿ ಶಿಯರ್ ವಾಟರ್ ಹಕ್ಕಿ ಪತ್ತೆ

error: Content is protected !!
Scroll to Top