ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.13. ಕಣಜದ ಹುಳುಗಳ ದಾಳಿಯಿಂದ ಪೈಂಟಿಂಗ್ ಕಾರ್ಮಿಕರೋರ್ವರು ಮೃತಪಟ್ಟ ದಾರುಣ ಘಟನೆ ಚಿತ್ತಾರಿಕಾಲ್ ನಲ್ಲಿ ನಡೆದಿದೆ.


ಚಿತ್ತಾರಿಕಾಲ್ ಕಂಬಲ್ಲೂರಿನ ಬಿಟೋ ಜೋಸೆಫ್ (35) ಮೃತಪಟ್ಟವರು. ಸಂಬಂಧಿಕ ರೋರ್ವರ ಮನೆಯಲ್ಲಿ ಈ ಘಟನೆ ನಡೆದಿದೆ. ಪೈಂಟಿಂಗ್ ಕೆಲಸದ ಸಂದರ್ಭದಲ್ಲಿ ಜೋಸೆ ಫ್ ರವರ ಮೇಲೆ ಕಣಜದ ಹುಳುಗಳು ದಾಳಿ ನಡೆಸಿದ್ದು, ಮನೆಯವರು ಹಾಗೂ ಪರಿಸರವಾಸಿಗಳು ಪರಿಯಾರಂ ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

error: Content is protected !!
Scroll to Top