ಆಸ್ತಿಗಾಗಿ ಅತ್ತೆ ಮಾವನನ್ನೇ ಹತ್ಯೆ ಮಾಡಿದ ಪಾಪಿ ಸೊಸೆ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.12. ಅತ್ತೆ – ಮಾವ ಎಂದರೆ ಸೊಸೆಗೆ ಎರಡನೇ ತಾಯಿ ಹಾಗೂ ತಂದೆ, ಆದರೆ ಆಸ್ತಿಯಾಸೆಗಾಗಿ ಸ್ವಂತ ಅತ್ತೆ – ಮಾವನನ್ನೇ ಸೊಸೆ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ವರದಿಯಾಗಿದೆ. ಇಬ್ಬರು ಸಹಚರರ ನೆರವಿನೊಂದಿಗೆ ವೃದ್ಧ ದಂಪತಿಯನ್ನು ಅವರ ಸೊಸೆ ಮೋನಿಕಾ ದೆಹಲಿಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

70 ರ ಹರೆಯದ ಇಬ್ಬರು ಹಿರಿಯ ನಾಗರಿಕರು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಸೊಸೆ ಮೋನಿಕಾ ಕೊಲೆ ಮಾಡಲು ಇಬ್ಬರು ಪುರುಷರ ಸಹಾಯವನ್ನು ಕೋರಲಾಗಿದೆ. ಈ ಇಬ್ಬರಲ್ಲಿ ಒಬ್ಬರು ಆಕೆಯ ಬಾಯ್‌ಫ್ರೆಂಡ್‌ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Also Read  ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ➤ 'ಮೆಟ್ರೋ ಸಂಚಾರ'ದ ಅವಧಿ ವಿಸ್ತರಣೆ

error: Content is protected !!
Scroll to Top