ಮನಸ್ಸಿನ ಆಘಾತಗಳಿಗೆ ಯೋಗ ಧ್ಯಾನದಂತಹ ಪುನಶ್ಚೇತನಕಾರಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಿ…

(ನ್ಯೂಸ್ ಕಡಬ) newskadaba.com. ಬೆಂಗಳೂರು, .11. ಯೋಗ ಮತ್ತು ಧ್ಯಾನವು ಪುರಾತನ ಪುನಶ್ಚೇತನಕಾರಿ ವಿಜ್ಞಾನಗಳಾಗಿದ್ದು, ಮನಸ್ಸು, ಆತ್ಮ ಮತ್ತು ದೇಹವನ್ನು ಸಮಗ್ರವಾಗಿ ಗುಣಪಡಿಸಲು ಚಿಕಿತ್ಸೆಯಾಗಿ ಬಳಸಬಹುದು. ದೇಹವನ್ನು ಆರೋಗ್ಯವಾಗಿಡಲು, ಮನಸ್ಸನ್ನು ಬಲಪಡಿಸಲು ಮತ್ತು ಆತ್ಮವನ್ನು ಶಾಂತಗೊಳಿಸಲು ಈ ಎರಡಕ್ಕಿಂತ ಉತ್ತಮವಾಗಿ ಬೇರೇನು ಕಾರ್ಯನಿರ್ವಹಿಸುವುದಿಲ್ಲ.  ಇದೀಗ ಎಲ್ಲೆಡೆ ಯೋಗ ಮತ್ತು ಧ್ಯಾನದ ಬಗೆಗಿನ ಮಹತ್ವ ಮತ್ತು ಆಸಕ್ತಿ ಹೆಚ್ಚುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವವರು ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಇನ್ನೂ ಕೆಲವರು ಈ ಅಭ್ಯಾಸಗಳನ್ನು ಪ್ರಾರಂಭಿಸಲು ಇಚ್ಚಿಸುತ್ತಿದ್ದಾರೆ.

ಮನಸ್ಸಿನ ಶಾಂತಿ, ನೆಮ್ಮದಿಯ ಆತ್ಮ, ನೆಮ್ಮದಿಯ ನಿದ್ದೆ ಸೇರಿದಂತೆ ಜೀವನದಲ್ಲಿನ ಎಲ್ಲಾ ಧನಾತ್ಮಕ ವಿಚಾರಗಳಿಗೆ ಶಾಂತಿಯಿಂದಿರುವುದು ಪ್ರಮುಖ ಅಂಶವಾಗಿದೆ. ಆಘಾತಕಾರಿ ಅನುಭವಗಳನ್ನು ಹೊಂದಿರುವ ಜನರು ಯೋಗ ಮತ್ತು ಧ್ಯಾನದ ಅಭ್ಯಾಸದಿಂದ ಪ್ರಯೋಜನ ಪಡೆಯಬಹುದು. ಆಘಾತವು ಒಬ್ಬರ ವ್ಯಕ್ತಿತ್ವವನ್ನು ಬದಲಾಯಿಸಬಹುದು. ಇದು ಹಲವಾರು ನರವೈಜ್ಞಾನಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸದೊಂದಿಗೆ, ಇವುಗಳಿಂದ ದೂರವಿರಬಹುದು.

Also Read  ಅರಣ್ಯ ಇಲಾಖೆ ಉರಗ ರಕ್ಷಕನ ಕಾಲು ಕಡಿದು ಭೀಕರ ಹತ್ಯೆ

ಯೋಗದ ಪರಿಣಾಮ

ಆಘಾತಕಾರಿ ಅನುಭವವು ನಮ್ಮ ಮನಸ್ಸು ಮತ್ತು ದೇಹದಲ್ಲಿಯೇ ವಾಸಿಸುತ್ತದೆ. ಇದು ದೈಹಿಕ ಸಂವೇದನೆಗಳ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, ಇದರಿಂದಾಗಿ ಉಂಟಾಗುವ ಆತಂಕವು ಅವರ ಉಸಿರಾಟವು ಅರಿವಿಲ್ಲದಂತಾಗುತ್ತದೆ ಮತ್ತು ಇಡೀ ದೇಹವು ಗಟ್ಟಿಯಾಗಿ, ಬಿಗಿಯಾಗುವಂತೆ ಮಾಡುತ್ತದೆ. ಇಂತಹ ಸಮಯದಲ್ಲಿ ಭಯ ಅವರನ್ನು ಆವರಿಸುತ್ತದೆ. ಹೀಗಾಗಿ ಯೋಗದ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೀಗೆ ಹೃದಯ ಬಡಿತವನ್ನು ತಗ್ಗಿಸಲು ಅವಕಾಶ ನೀಡುತ್ತದೆ. ಜನರನ್ನು ಅವರ ದೇಹದೊಂದಿಗೆ ಮತ್ತೆ ಸಂಪರ್ಕಕ್ಕೆ ತರುತ್ತದೆ.

ಧ್ಯಾನವನ್ನು ಪ್ರತಿದಿನ ಮಾಡಿದರೆ, ಅದು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ನಿಧಾನವಾಗಿ ಮರುತರಬೇತಿಗೊಳಪಡಿಸುತ್ತದೆ ಮತ್ತು ಆಘಾತವನ್ನು ಹೋಗಲಾಡಿಸುತ್ತದೆ. ಇದು ಆತಂಕ, ಖಿನ್ನತೆ, ನಿದ್ರಾಹೀನತೆ ಮತ್ತು ದುಃಸ್ವಪ್ನ ನಿರ್ವಹಣೆಗೆ ಸಹಾಯ ಮಾಡುತ್ತದೆ. ಕೋಪವನ್ನು ಬಿಡಲು ಮತ್ತು ಸಾಮಾಜಿಕವಾಗಿ ಇತರರೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ.

error: Content is protected !!
Scroll to Top