ರೆಮ್ಡಿಸಿವರ್, ಫಾವಿಪಿರಾವಿರ್ ಔಷಧ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com. ನವದೆಹಲಿ, .11. ಕೊರೊನಾ ಸೋಂಕಿತರ ಚಿಕಿತ್ಸೆಗೆ ರೆಮ್​ಡಿಸಿವರ್​ ಮತ್ತು ಫಾವಿಪಿರಾವಿರ್ ಔಷಧಗಳನ್ನು ಸರ್ಕಾರದ ಅನುಮೋದನೆ ಇಲ್ಲದೇ ಬಳಸಲಾಗಿದೆ.  ಇವು ಸೋಂಕಿನ ಮೇಲೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ಮಾಡಿದೆ. ಇಂತಹ ಅರ್ಜಿಗಳು ವಿಚಾರಣೆ ಮಾಡಲು ಯೋಗ್ಯವಲ್ಲ ಎಂದು ಇದೇ ವೇಳೆ ಹೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಪೀಠದಲ್ಲಿದ್ದರು.

ವಕೀಲ ಎಂ.ಎಲ್.ಶರ್ಮಾ ಎಂಬುವವರು ಕೊರೊನಾ ಸೋಂಕಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತಿರುವ ರೆಮ್​ಡಿಸಿವರ್​ ಮತ್ತು ಫಾವಿಪಿರಾವಿರ್ ಔಷಧಗಳ ಗುಣಮಟ್ಟ ಮತ್ತು ಪರಿಣಾಮವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೊರೊನಾಗೆ ನೀಡಲಾಗುವ ಔಷಧಿಗಳ ಪಟ್ಟಿಯನ್ನು ಉಲ್ಲೇಖಿಸಿದ್ದ ಶರ್ಮಾ ಅವರು, ಈ ಪಟ್ಟಿಯಲ್ಲಿ ಎಲ್ಲಿಯೂ ಈ ಔಷಧಿಗಳ ಬಗ್ಗೆ ಪ್ರಸ್ತಾಪವಿಲ್ಲ. ಕೊರೊನಾ ವೈರಸ್‌ಗೆ ಅಧಿಕೃತ ಔಷಧಿಗಳಾಗಿ ಇವುಗಳನ್ನು ಗೊತ್ತುಪಡಿಸಲಾಗಿಲ್ಲ ಎಂದು ವಾದಿಸಿದ್ದರು.

Also Read  ಕುಕ್ಕೆ ಸುಬ್ರಹ್ಮಣ್ಯ: ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳು ನಾಳೆಯಿಂದ ಆರಂಭ

ಡಬ್ಲ್ಯೂಎಚ್​ಒ ವರದಿಯು ರೆಮ್‌ಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್/ರಿಟೋನವಿರ್ ಮತ್ತು ಇಂಟರ್‌ಫೆರಾನ್ ಕೋವಿಡ್ ಚಿಕಿತ್ಸೆಯಲ್ಲಿ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರುವ ಔಷಧಿಗಳು ಎಂದು ಸೂಚಿಸಿದೆ. ದೇಶದಲ್ಲಿ ಸೋಂಕು ತಾರಕಕ್ಕೇರಿದ್ದ ವೇಳೆ ಇದೇ ಔಷಧಗಳನ್ನು ಬಳಕೆಗೆ ನೀಡಲಾಗಿದೆ. 10 ಡ್ರಗ್ಸ್​ ಕಂಪನಿಗಳು ಹೇರಳವಾಗಿ ಮಾರಾಟ ಮಾಡಿವೆ. ಅವುಗಳ ವಿರುದ್ಧ ಕ್ರಮ ಕೈಗೊಂಡು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೋರಿದ್ದರು.

ಕೇಂದ್ರದ ಉತ್ತರ ಕೇಳಿದ್ದ ಸುಪ್ರೀಂ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ 2020 ರಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಮತ್ತು ಫಾವಿಪಿರಾವಿರ್ ಅನ್ನು ಚಿಕಿತ್ಸಾ ಔಷಧಿಗಳಾಗಿ ಬಳಸಲು ಅನುಮೋದನೆ ನೀಡಲಾಗಿತ್ತೇ ಎಂಬುದರ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ, ಕೇಂದ್ರ ಸರ್ಕಾರ, ಕೊರೊನಾ ಚಿಕಿತ್ಸೆಗಾಗಿ ಡ್ರಗ್ಸ್​ ಕಂಪನಿಗಳು ತಯಾರಿಸಿದ ಔಷಧಿಗಳಿಗೆ ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ಬಳಕೆಗೆ ಅನುಮತಿ ನೀಡಿದೆ ಎಂದು ವರದಿ ನೀಡಿತ್ತು. ಇದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್​, ವಕೀಲ ಶರ್ಮಾ ಅವರ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.

Also Read  ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ► ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಕಡಿಮೆಯಾಗಬೇಕು ►ವಿಶ್ವನಾಥ ರೈ

ದೇಶದಲ್ಲಿ ಕೊರೊನಾ ಕೇಸ್​: ದೇಶದಲ್ಲಿ ಹೊಸ ಕೋವಿಡ್ ಕೇಸ್​ಗಳು ಹೆಚ್ಚಾಗುತ್ತಿವೆ. ನಿನ್ನೆಯಿಂದ 24 ಗಂಟೆಗಳ ಅವಧಿಯಲ್ಲಿ 5880 ಹೊಸ ಕೇಸ್​ಗಳು ಪತ್ತೆಯಾಗಿವೆ. ಇದೇ ವೇಳೆ 3481 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ದಿನದ ಪಾಸಿಟಿವಿಟಿ ದರ ಶೇ.6.91 ಏರಿಕೆ ಕಂಡಿದೆ. ಭಾನುವಾರ ಒಂದೇ ದಿನ 85,076 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ದಿನೇ ದಿನೆ ಕೋವಿಡ್​ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇರಳ, ಪುದುಚೇರಿ, ಹರಿಯಾಣದಲ್ಲಿ ಮಾಸ್ಕ್​ ಕಡ್ಡಾಯ ಮಾಡಿ ಆಯಾ ರಾಜ್ಯ ಸರ್ಕಾರಗಳು ಆದೇಶ ಮಾಡಿವೆ.

error: Content is protected !!
Scroll to Top