ಖಾಲಿಸ್ತಾನ ನಾಯಕ ಅಮೃತ್‌ಪಾಲ್‌ ಸಿಂಗ್‌ ಸಹಚರ ಅರೆಸ್ಟ್

(ನ್ಯೂಸ್ ಕಡಬ)newskadaba.com ಚಂಢೀಗಡ, ಏ.11. ಖಾಲಿಸ್ತಾನ ನಾಯಕ, ಸಿಖ್‌ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ನ ಸಹಚರ ಪಪಲ್​ಪ್ರೀತ್ ಸಿಂಗ್​ನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿನ ಡೇರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪಪಲ್​ಪ್ರೀತ್ ಸಿಂಗ್‌ ಇರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದ್ದು, ಇದೀಗ ಆತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಅಮೃತ್​ಪಾಲ್​ ಸಿಂಗ್ ಕೆಲ ದಿನಗಳಲ್ಲಿ ಬಂಧನವಾಗಬಹುದು ಎಂದು ಪಂಜಾಬ್‌ ಪೊಲೀಸರು ಹೇಳಿದ್ದಾರೆ.

ಇನ್ನು ಅಮೃತಪಾಲ್ ಮತ್ತು ಪಪಲ್​ಪ್ರೀತ್ ಸಿಂಗ್‌ ಫಗ್ವಾರಾ ಪಟ್ಟಣ, ನಾದ್ಲೋನ್ ಮತ್ತು ಬೀಬಿ ಗ್ರಾಮದ ಮೂರು ವಿಭಿನ್ನ ಡೇರಾಗಳಲ್ಲಿ ತಂಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read  ಶಾಲಾ ವಿದ್ಯಾರ್ಥಿನಿಯರಿಗೆ ವಿಷ ಉಣಿಸಿದ ದುಷ್ಕರ್ಮಿಗಳು

 

 

error: Content is protected !!
Scroll to Top